ರಾಮನಾಥಪುರ- ಇಲ್ಲಿಯ ಪ್ರಸನ್ನ ಶ್ರೀ ಸುಬ್ರಹ್ಮಣ್ನಸ್ವಾಮಿ ದೇವಾಲಯದಲ್ಲಿ ಇಂದು ಶುಕ್ರವಾರ ಬೆಳಿಗ್ಗೆ ದೇವಾಲಯದ ಸಭಾಂಗಣದಲ್ಲಿ ವೇ. ಶ್ರೀಶಾಆಚಾರ್ ಅವರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಿತು.

ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಇಂದು ಶುಕ್ರವಾರ ಬೆಳಿಗ್ಗೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಅಮ್ಮನವರನ್ನು ಪ್ರತಿಸ್ಥಾಪಿಸಿ, ಚಂಡಿಕಾಹೋಮ, ಮಹಾ ಮಂಗಳಾರತಿ, ನಂತರ ಪ್ರಸಾದದ ವ್ಯವಸ್ಥೆ ನಡೆಯಿತು. ಈ ಸಂದರ್ಭದಲ್ಲಿ ಅರ್ಚಕರು ಹಾಗೂ ಭಕ್ತರು ಭಾಗವಹಿಸಿದ್ದರು.
ಪ್ರತಿ ನಿತ್ಯ ದೇವಾಲಯಗಳಿಗೆ ಭಕ್ತ ಸಮೂಹ.
ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಲ್ಲಿರುವ ಹತ್ತಾರು ದೇವಾಲಯಗಳಿಗೆ ಪ್ರತಿ ನಿತ್ಯ ಸಾವಿರಾರು ಭಕ್ತರು ಅಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಈವಾಗ ಬೇಸಿಗೆ ಹಾಗೂ ಶಾಲಾ ಕಾಲೇಜುಗಳ ರಜಾ ಕಾಲವಾಗಿರುವುದರಿಂದ ಪ್ರತಿನಿತ್ಯ ಅಧಿಕ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಪಡೆದು ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯಲ್ಲಿ ಹರಕೆ ತೀರಿಸಲು ಭಕ್ತರು ಹಣ್ಣು ತುಪ್ಪ ಮಾಡಿಸುತ್ತಾರೆ . ಅಲ್ಲದೇ ಇಲ್ಲಿಯ ಚತುರ್ಯಗಮೂರ್ತಿ, ರಾಮೇಶ್ವರಸ್ವಾಮಿ, ಶ್ರೀ ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ವರದಿ. ಎಂ.ಎನ್. ಕುಮಾರಸ್ವಾಮಿ.
