ರಾಮನಾಥಪುರ, ಮಾ.18: ಸರ್ಕಾರಿ ಶಾಲೆಗಳಲ್ಲಿ ಕ್ಷೇತ್ರದ ಶಾಸಕರ ಧರ್ಮಪತ್ನಿ ತಾರಾಮಂಜು ಅವರ ಸಹಕಾರದಿಂದ ಆರಂಭಗೊಂಡಿರುವ ಮಕ್ಕಳ ಮನೆ ಶಾಲೆಗಳು ಮತ್ತು ಮಕ್ಕಳ ಮನೆ ಕಾನ್ವೆಂಟ್ಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಈಗಾಗಲೇ 17 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಪರಿಷತ್ತು ಸದಸ್ಯ ಮೋಹನ್ ಕುಮಾರ್ ಹೇಳಿದರು.
ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಸರಸ್ವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪೋಷಕರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರದೊಂದಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವೂ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ಸಂಯೋಜಕರು ಸದಾಶಿವಪ್ಪ, ಸಿದ್ದಯ್ಯ, ಮೋಹನ್ ಕುಮಾರ್, ಸದಾಶಿವ, ಕೇಶವಮೂರ್ತಿ, ವಿಜಯಕುಮಾರ್, ಕುಮಾರ್, ಎ.ಬಿ. ಮೂರ್ತಿ, ಬಿ.ಜೆ. ಮಂಜೇಗೌಡ, ಸತೀಶ್, ದ್ಯಾವಯ್ಯ, ಅಶೋಕ್, ಪಾಲಕ್ಷ, ಸುಮಿತ್ರ, ಸುಜಾತ, ಪುಪ್ಪ, ವನೀತಾ, ಸರಸ್ವತಿ, ಕೃಷ್ಣ, ಮಂಜೇಗೌಡ, ರಾಮೇಗೌಡ, ಆರ್.ಕೆ. ಶ್ರೀನಿವಾಸ್, ರವಿ, ಎಚ್.ಪಿ. ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್. ದೇವರಾಜ್ ಸ್ವಾಗತಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ – ಕುಮಾರಸ್ವಾಮಿ
