ರಾಮನಾಥಪುರ : ಹೋಬಳಿಯ ಬಸವಪಟ್ಟಣ ಗ್ರಾಮದ ಜನತಾ ಹೌಸ್ ವತಿಯಿಂದ 20 ನೇ ವರ್ಷದ ಗ್ರಾಮ ದೇವತೆ ಶ್ರೀ ಕಾವಲಮ್ಮನವರ ಉತ್ಸವವನ್ನು ಏರ್ಪಡಿಸಿದ್ದು ಶ್ರೀ ಕಾವಲಮ್ಮನವರ ಉತ್ಸವ ಮೂರ್ತಿಯನ್ನು ಬೆಳ್ಳಿರಥದ ಮೇಲೆ ಬೆಳಗ್ಗೆ ಪ್ರಾರಂಭವಾಗಿ ಸಂಜೆವರೆಗೂ ಗ್ರಾಮದಾದ್ಯಂತ ಅಮ್ಮನವರನ್ನು ಮೆರವಣಿಗೆ ಮಾಡಲಾಯಿತು.
ಉತ್ಸವದಲ್ಲಿ ಜನತಾ ಸೈಟ್ ಬಸವಪಟ್ಟಣದ ಬಿವಿ ಲೋಕೇಶ್ , ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀನಿವಾಸ್ ಆರ್ ಕೆ , ನಾಗಶೆಟ್ಟಿ, ಪಾಪ ಕೂಡಿಗೆ, ವಿನಯ್, ರಂಗಸ್ವಾಮಿ, ಗಿರೀಶ್ , ಸರೋಜಮ್ಮ , ನಾಗಮ್ಮ ,ಜಯಮ್ಮ ,ವಿಶ್ವ, ಮಹೇಶ್ ಮತ್ತು ಇತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು.
ವರದಿ : ಕುಮಾರಸ್ವಾಮಿ
