ರಾಮನಾಥಪುರ : ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ವರ್ಧಂತೋತ್ಸವ ಉತ್ತರಾಧಿ ಮಠದ ವ್ಯವಸ್ಥಾಪಕರು ಶ್ರೀ ವಿ. ಕನಕಾಚಾರ್ಯರ ಸಾನಿಧ್ಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಮುಕ್ತಾಯಗೊಂಡವು.
ರಾಮನಾಥಪುರ – ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಉತ್ತರಾಧಿ ಮಠದಲ್ಲಿ ಶ್ರೀಗುರು ರಾಘವೇಂದ್ರಸ್ವಾಮಿಗಳವರ ವರ್ಧಂತೋತ್ಸವ ಅಂಗವಾಗಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ 5 ದಿವಸಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು, ಉತ್ಸವಾದಿಗಳು ಮುಕ್ತಾಯಗೊಂಡವು.

ರಾಮನಾಥಪುರದ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾಧಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ವಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅಲ್ಲದೇ ಬೃಂದಾವನಕ್ಕೆ ವಿಶೇಷ ಮನಮೋಹಕ ಹೂವಿನ ಅಲಂಕಾರ ಭಕ್ತರ ಮನ ಸೆಳೆಯಿತು. ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆಯಲ್ಲಿ ಭಕ್ತರು ಶ್ರೀಮಠಕ್ಕೆ ಅಗಮಿಸಿ ಭಕ್ತಿಭಾವದಿಂದ , ಅರತಿ ದೀಪ ಬೆಳಗಿಸಿ ಗುರುರಾಯರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಇಲ್ಲಿಯ ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ವರ್ಧಂತೋತ್ಸವ, ಶ್ರೀಸೀತಾರಾಮಾಆಂಜನೇಯ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಸಾಯಂಕಾಲ ರಥೋತ್ಸವ ಮಹಾಮಂಗಳಾರತಿ ನಡೆದ ಪ್ರತಿನಿತ್ಯ ಎಲ್ಲ ಭಕ್ತರು ಪಾಲ್ಗೊಂಡು ಸಹಕರಿಸಿದ್ದಕ್ಕೆ ಕನಕಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು.

ಬಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿ, ವರ್ಧಂತೋತ್ಸವಕ್ಕೆ ಸಹಕರಿಸಿದ ಭಕ್ತರುಗಳನ್ನು ವೇ. ಕನಕಾಚಾರ್ಯರು ಗೌರವಿಸಿದರು.
ವರದಿ : ಕುಮಾರಸ್ವಾಮಿ
