ರಾಮನಾಥಪುರ – ಇಲ್ಲಿಯ ಸುಬ್ರಹ್ಮಣ್ಯನಗರದಲ್ಲಿರುವ ಪ್ಲಾಟ್ ಪಾಂ. 7- ಹಾಗೂ ,63 ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ವೈಜ್ಞಾನಿಕ ಬೆಲೆ ನೀಡಲು ಡಾ. ಮೋಹನ್ ಮಲ್ಲಪ್ಪ ಒತ್ತಾಯಿಸಿದರು.
ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ರೈತರು ಕಷ್ಟಪಟ್ಟು ಬೆಳೆದಿರುವ ತಂಬಾಕಿಗೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿದಿರುವುದರಿಂದ ಬೆಳೆಗಾರರು ಉತ್ಪಾದನಾ ವೆಚ್ಚಕ್ಕಿಂತ FCC ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ತಂಬಾಕು ಮಂಡಳಿ ಬೆಲೆ ಕುಸಿತ ತಡೆಯಬೇಕು ಎಂದು ಜೆಡಿಎಸ್ ಮುಖಂಡ ಡಾ. ಮೋಹನ್ ಮಲ್ಲಪ್ಪ ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಆರಂಭದಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಪ್ರತಿ ಕೆ.ಜಿಗೆ ₹ 300ರಿಂದ ₹320ಕ್ಕೆ ಮಾರಾಟವಾಗಿತ್ತು, ಈಗ ಏಕಾಏಕಿ ಪ್ರತಿ ಕೆಜಿ ತಂಬಾಕಿಗೆ ₹50 ಕುಸಿತ ಕಂಡಿದೆ. ಎರಡು ಮತ್ತು ಮೂರನೇ ದರ್ಜೆ ತಂಬಾಕು ₹150ರಿಂದ ₹200ಕ್ಕೆ ಕುಸಿತ ಕಂಡಿದೆ. ಇದರಿಂದ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ತಂಬಾಕು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದರಕ್ಕೆ ತಂಬಾಕು ಮಾರಾಟ ಮಾಡಿದರೆ ಸಾಲ ಮಾಡಿ ತಂಬಾಕು ಬೆಳೆದಿರುವ ಬೆಳೆಗಾರರ ಸಾಲ ಮರುಪಾವತಿಸುವುದಾದರೂ ಹೇಗೆ, ವಾಣಿಜ್ಯ ಬೆಳೆಗೆ ವೈಜ್ಞಾನಿಕ ದರ ನೀಡದೇ ರೈತರು ಹತಾಶೆಗೊಂಡು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ. ಆದುದರಿಂದ ತಂಬಾಕು ಮಂಡಳಿ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್.ಡಿ.ಕೆ ಬಳಿಗೆ ನಿಯೋಗ: ವಾಣಿಜ್ಯ ಬೆಳೆ ತಂಬಾಕು ಹಳೆ ಮೈಸೂರು ಭಾಗದ ಜೀವನಾಡಿಯಾಗಿದ್ದು, ಪ್ರತಿಬಾರಿಯೂ ದರ ಕುಸಿತ ಎದುರಾಗಿ ಬೆಳೆಗಾರರು ಬೀದಿಗಿಳಿಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಈ ಸಂಬAಧ ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿಗೆ ಬೆಳೆಗಾರರ ನಿಯೋಗ ತೆರಳಿ ಸಮಸ್ಯೆ ಬಗ್ಗೆ ವಿವರಿಸಿ ವೈಜ್ಞಾನಿಕ ದರ ಸಿಗುವಂತೆ ಕ್ರಮವಹಿಸಲು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಕರ್ನಾಟಕ ತಂಬಾಕು ಹರಾಜು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕರ್ನಾಟಕದಲ್ಲಿ 2025-26ನೇ ಸಾಲಿನಲ್ಲಿ ಮಂಡಳಿ ಗರಿಷ್ಠ 100 ಮಿಲಿಯನ್ ಕೆ.ಜಿ ಬೆಳೆಯಲು ಅನುಮತಿ ನೀಡಿತ್ತು. ಆದರೆ ಮೇ, ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ 80ರಿಂದ 85 ಮಿಲಿಯನ್ ಕೆಜಿ ಮಾತ್ರ ತಂಬಾಕು ಉತ್ಪಾದನೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಮಂಡಳಿ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ತಂಬಾಕು ಬೆಳೆಯಲಾಗಿದೆ. ಅಲ್ಲಿಯೇ ಕಂಪನಿಗಳು ಹೆಚ್ಚಿನ ಖರೀದಿ ನಡೆಸಿರುವುದರಿಂದ ಇಲ್ಲಿನ ತಂಬಾಕು ದರ ಕುಸಿಯುತ್ತಿದೆ. ರಾಜ್ಯದ ತಂಬಾಕಿನಲ್ಲಿ ಆಯಿಲ್ ನಿಕೋಟಿನ್ ಇರುವುದರಿಂದ ಹೆಚ್ಚಿನ ಬೇಡಿಕೆಯಿದೆ. ಆದರೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಈ ಬಗ್ಗೆಯೂ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯಲಾಗುವುದು ಎಂದು ಡಾ. ಮೋಹನ್ ಮಲ್ಲಪ್ಪ ತಿಳಿಸಿದರು.
ವರದಿ : ಕುಮಾರಸ್ವಾಮಿ
