ರಾಮನಾಥಪುರ :- ಹೋಬಳಿ ಗಂಗೂರು ಗ್ರಾಮದ ಶ್ರೀ ಆದಿಚುಂಚನಗಿರಿ ಟ್ರಸ್ಟ್ ವಾಗ್ದೇವಿ ವಿದ್ಯಾಸಂಸ್ಥೆಯ ನೂತನ ಶಾಲಾ ಕಟ್ಟಡ ಗುದ್ದಲಿ ಪೂಜೆ ಕಾರ್ಯ ಶ್ರೀ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಮಾಜಿ ಸಚಿವರು ಹಾಗೂ ಶಾಸಕರಾದ ಎ ಮಂಜುಣ್ಣ ನವರು ಗುದ್ದಲಿ ಪೂಜೆ ಕಾರ್ಯ ನೆರವೇರಿಸಿ ಮಾತನಾಡಿ . ಒಂದು ವರ್ಷದ ಒಳಗಾಗಿ ವಿದ್ಯಾ ಸಂಸ್ಥೆಯ ನೂತನ ಸುಂದರ ಕಟ್ಟಡ ನಿರ್ಮಾಣವಾಗಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.

ಮನುಷ್ಯ ಶಾಶ್ವತವಲ್ಲ, ನಾವುಗಳು ಮಾಡುವ ಅಭಿವೃದ್ಧಿ ಕಾರ್ಯಗಳೇ ಶಾಶ್ವತ, ನಾವು ಮಾಡಿದ ಪುಣ್ಯ ಕೆಲಸಗಳೇ ನಮ್ಮ ಹೆಸರನ್ನು ಸ್ಮರಿಸುವಂತೆ ಮಾಡುತ್ತವೆ ಕಟ್ಟಡ ನಿರ್ಮಾಣ ಮಾಡಿದ್ದು ಅಧಿಕಾರಿಗಳು ಹಾಗೂ ಸ್ಥಳೀಯರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು ಒಂದು ವರ್ಷದ ಒಳಗಾಗಿ ವಿದ್ಯಾ ಸಂಸ್ಥೆಯ ನೂತನ ಸುಂದರ ಕಟ್ಟಡ ನಿರ್ಮಾಣವಾಗುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮೀಣ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವುದು ಎಂದರು.
ಜಿ.ಸಿ. ಮಂಜೇಗೌಡ, ಜಿ.ಟಿ. ಕುಮಾರಸ್ವಾಮಿ, ಕುಚಲೇಗೌಡ, ಕೃಷ್ಣೇಗೌಡ, ಯ. ಬೋರೇಗೌಡರು, ಗಂಗಾಧರ್ ಮುಂತಾದವರು ಭಾಗವಹಿಸಿದ್ದರು.
ವರದಿ : ಕುಮಾರಸ್ವಾಮಿ
