ರಾಮನಾಥಪುರ : ಹೋಬಳಿ ಬಸವಪಟ್ಟಣದ ಶರಣೆ ಲೋಕಮಾತಮಲ್ಲಪ್ಪ ಅವರ ನೂತನ ಸ್ವಗೃಹದಲ್ಲಿ ಮಾರ್ಚ್ 9 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಮೃದ್ಧಿ ನಿವಾಸದ ಅವರಣದಲ್ಲಿ ಶ್ರೀಮದ್ ಕಾಶಿಪೀಠದ ಹಿರಿಯ ಜಗದ್ಗುರುಗಳವರ ವೈಭವೋಪೇತವಾದ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ, ಹಾಗೂ ಧಾರ್ಮಿಕ ಸಭೆಯಲ್ಲಿ ಉತ್ತರಪ್ರದೇಶ ವಾರಣಾಸಿ, ಶ್ರೀ ಜಗದ್ಗುರು ಕಾಶೀಜ್ಲಾನ ಸಿಂಹಾಸನ ಮಹಾ ಸಂಸ್ಥಾನ ಪೀಠ ಜಂಗಮವಾಡಿ ಮಠದ ಶ್ರೀಮದ್ ಕಾಶಿಜ್ಲಾನ ಸಿಂಹಾಸನಾಧೀಶ್ವರ, ಶ್ರೀ 1008 ಹಿರಿಯ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.
ನುಗ್ಗೆಹಳ್ಳಿ ಪುರವರ್ಗ ಹಿರೇಮಠದ ಶ್ರೀ ಡಾ. ಮಹೇಶ್ವರ ಶಿವಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಮೈಸೂರು ಶ್ರೀ ಕೆಂಪಮ್ಮ ಮತ್ತು ಕೊಲ್ಲಾಪುರದಮ್ಮ ಆಂಜನೇಯಸ್ವಾಮಿ ದೇವಸ್ಥನದ ಧರ್ಮಾಧಿಕಾರಿಗಳು ಶ್ರೀ ಅಭಿನಂದನ್, ಮೈಸೂರು ಅಗಮಿಕರು ಹಾಗೂ ಧಾರ್ಮಿಕ ಚಿಂತಕರು ಕೆ.ಎಸ್. ದಿನೇಶಶಾಸ್ತ್ರಿಗಳು, ಶರಣೆ, ಬಿ.ಎಸ್. ಲೋಕಮಾತಮಲ್ಲಪ್ಪ, ಜಿ.ಎ. ಅಪೂರ್ವಶ್ರೀಮೂರ್ತಿ ಮುಂತಾದ ಹರಗುರು ಚರಮೂರ್ತಿಗಳು ಮುಂತಾದವರು ಭಾಗವಹಿಸುವ ಈ ಸಹಸ್ರ ಚಂದ್ರಶಾಂತಿ ಮಹೋತ್ಸವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಸಮಾಜ ಸೇವಕರು ಶ್ರೀ ಸೋಮಣ್ಣ ಮನವಿ ಮಾಡಿದರು.
ವರದಿ. ಎಂ.ಎನ್. ಕುಮಾರಸ್ವಾಮಿ
