ರಾಮನಾಥಪುರ : – ಇಲ್ಲಿಯ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಶ್ರೇಯಸ್ ಪಟೇಲ್ ಭೇಟಿ ಅಧಿಕಾರಿಗಳು ಮತ್ತು ಬೆಲೇಗಾರರೊಂದಿಗೆ ಚರ್ಚೆ ನಡೆಸಿದರು.

ಮಾರುಕಟ್ಟೆ ಅಧೀಕ್ಷಕರೊಂದಿಗೆ ಮಾತನಾಡಿದ ಅವರು ತಂಬಾಕಿ ಬೆಲೆ ಕುಸಿತ ಕುರಿತಂತೆ ನಾನು ಈಗಾಗಲೆ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ. ಬೆಲೆ ಇಳಿಕೆ ಕುರಿತು ನಾನು ಮತೊಮ್ಮೆ ವಾಣಿಜ್ಯ ಸಚಿವರನ್ನು ಭೇಟಿ ಅಬಕಾರಿ ಸುಂಕವನ್ನು ತೆಗೆದು ತಂಬಾಕು ಬೆಲೆಗಾರರನ್ನು ಬೆಲೆ ಕುಸಿತದಿಂದ ಪಾರು ಮಾಡುವ ಕುರಿತು ಮಾತನಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರು ಶ್ರೀಧರಗೌಡ, ಮುಂತಾದ ಕಾಂಗ್ರೆಸ್ ಮುಖಂಡರು , ತಂಬಾಕು ಬೆಳೆೆಗಾರರ ಸಂಘದ ಪದಾಧಿಕಾರಿಗಳು, ನೂರಾರು ಬೆಳೆಗಾರರು ಮತ್ತು ಅಧಿಕಾರಿಗಳಿದ್ದರು.
ವರದಿ : ಕುಮಾರಸ್ವಾಮಿ, ರಾಮನಾಥಪುರ
