ರಾಮನಾಥಪುರ: ರಾಮನಾಥಪುರ ಸಮೀಪದ ದೊಡ್ಡಮಗ್ಗೆ ಹೋಬಳಿಯ ದುಮ್ಮಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ Sri Maramma Thayi Temple ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ಮಾರಮ್ಮತಾಯಿ ಪ್ರತಿಷ್ಠಾಪನಾ ಮಹೋತ್ಸವ ಮಾರ್ಚ್ 13ರಂದು ನಡೆಯಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಯುಗಯೋಗಿ ಪರಮಪೂಜ್ಯ Balagangadharanatha Swamiji ಅವರ ದಿವ್ಯ ಸ್ಮರಣೆ ಹಾಗೂ ಪೂರ್ಣಾನುಗ್ರಹದೊಂದಿಗೆ ನಡೆಯಲಿದ್ದು, Nirmalanandanatha Swamiji ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಹಾಸನದ ಅಧಿಚುಂಚನಗಿರಿ ಶಾಖಾ ಮಠದ Shambhunatha Swamiji ಅವರ ಪಾವನ ಸಾನಿಧ್ಯದಲ್ಲಿ ಸಮಾರಂಭ ಜರುಗಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ H. D. Deve Gowda ಗೌರವ ಉಪಸ್ಥಿತಿ ವಹಿಸಲಿದ್ದು, ಮಾಜಿ ಸಚಿವರು ಹಾಗೂ ಶಾಸಕ A. Manju ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಧಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ Singanakuppe Suresh ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕ H. D. Revanna, ಮಾಜಿ ಶಾಸಕ A. T. Ramaswamy, ಜೆಡಿಎಸ್ ರಾಜ್ಯಾಧ್ಯಕ್ಷ Nikhil Kumaraswamy, ವಿಧಾನ ಪರಿಷತ್ ಸದಸ್ಯ Suraj Revanna ಸೇರಿದಂತೆ ಹಲವಾರು ಗಣ್ಯರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.