ರಾಮನಾಥಪುರ: ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಸುಮಾರು 28 ವರ್ಷಗಳ ಕಾಲ ಆರಾಧಕರಾಗಿ ಸೇವೆ ಸಲ್ಲಿಸಿದ್ದ ಅರ್ಚಕ ವೇ. ನಾರಾಯಣ ಐಯಂಗಾರ್ (78) ಅವರು ಮಂಗಳವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದರು.
ದೀರ್ಘಕಾಲದಿಂದ ದೇವಾಲಯದಲ್ಲಿ ಸ್ವಾಮಿಗೆ ಕೈಂಕರ್ಯ ಮಾಡುತ್ತ ಭಕ್ತರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಅವರ ಅಗಲಿಕೆಯಿಂದ ಭಕ್ತವೃಂದ ಹಾಗೂ ಪರಿಚಿತರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅವರು ಧರ್ಮಪತ್ನಿ ರಾಜಲಕ್ಷ್ಮಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಕಾವೇರಿ ನದಿಯ ದಂಡೆಯಲ್ಲಿ ನೆರವೇರಿತು.
