ರಾಮನಾಥಪುರ- ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದ ಸಭಾಂಗಣದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 5 ರವರೆಗೆ 10 ದಿವಸಗಳ ಕಾಲ ಶ್ರೀರಾಮನವಮಿಯ ಸಂಗೀತೋತ್ಸವ ಕಾರ್ಯಕ್ರಮದ ಪ್ರಯುಕ್ತ
ಈ ಸಂಗೀತ ಮಹೋತ್ಸವಕ್ಕೆ ಸಕಲ ಸಿದ್ದತೆಗೊಳ್ಳತ್ತಿದೆ ಎಂದು ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್. ಶ್ರೀನಿವಾಸ್ ತಿಳಿಸಿದರು.

ರಾಮನಾಥಪುರದ ಶ್ರೀ ಪಟ್ಟಾಭಿರಾಮಸ್ವಾಮಿ ದೇವಸ್ಥಾನದ ದ್ರಾವಿಡರ ಶೈಲಿ.
ಶ್ರೀ ಪಟ್ಟಾಭಿರಾಮ ಎಂಬ ನಾಮಾಂಕಿತವುಳ್ಳ ಶ್ರೀರಾಮನ ದೇವಾಲಯವು ಈ ಕಾವೇರಿ ನದಿ ದಂಡೆಯ ರಾಮನಾಥಪುರಲ್ಲಿದೆ ಇಂತಹ ದೇವಾಲಯವೂ ಕರ್ನಾಟಕದ ಹಾಸನ ಜಿಲ್ಲೆಯ ರಾಮನಾಥಪುರ ಮತ್ತು ತಮಿಳುನಾಡಿನ ಕುಂಭಕೋಣದಲ್ಲಿ ಮಾತ್ರವಿದ್ದರೂ ಪಟ್ಟಾಭಿಷಿಕ್ತನಾದ ಶ್ರೀರಾಮ ತನ್ನ ತೊಡೆಯ ಮೇಲೆ ಸೀತಾಮಾತೆಯನ್ನು ಕುಳ್ಳಿಸಿಕೊಂಡಿರುವ ಅಪೂರ್ವ ಭಂಗಿ ಈ ರಾಮನಾಥಪುರ ಶ್ರೀಕ್ಷೇತ್ರದಲ್ಲಿ ಮಾತ್ರ ಇದೆ. ಆದ್ದರಿಂದ ರಾಮನಾಥಪುರದ ಶ್ರೀ ಪಟ್ಟಾಭಿರಾಮನ ದೇವಾಲಯ ವೈಶಿಷ್ಟ್ಯಮಯ ಪೂರ್ಣವೇ ಸರಿ

ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯವು ಈ ಹಿಂದೆ ಪಾಪನಾಶಿನಿಯಾದ ಶ್ರೀಕ್ಷೇತ್ರ ರಾಮನಾಥಪುರಕ್ಕೆ ಸೌಭರಿ ಮಹರ್ಷಿಷಿಗಳು ಆಗಮಿಸಿ ಜಪತಪಾನುಷ್ಠಾನಗಳನ್ನು ಪೂರೈಸಿ ಸಮಸ್ತ ಉನ್ನತ ತೀರ್ಥಗಳ ಸಂಗಮವಾಗಿರುವ ಮಂಗಳಕಾರಣಿಯು ಆಗಿರುವ ಕಾವೇರಿ ನದಿಯ ಉತ್ತರ ದಂಡೆಯ ಮೇಲೆ ಅತಿ ಮನೋಹರ ಪ್ರತಿಮೆಯಾದ ಶ್ರೀ ಪಟ್ಟಾಭಿರಾಮನೊಂದಿಗೆ ಸೀತಾದೇವಿ, ಲಕ್ಷ್ಮಣ, ಭರತ ಶತ್ರುಘ್ನ ಮತ್ತು ಶ್ರೀರಾಮನ ಚರಣ ದಾಸ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿರುವುದನ್ನು ಇಲ್ಲಿ ನೋಡಬಹುದು.

ಸುಮಾರು 15ನೇ ಶತಮಾನದಲ್ಲಿ ವಿಜಯನಗರದ ಪ್ರತಿನಿಧಿಗಳು ಕಟ್ಟಿಸಿರಬಹುದೆಂದು ಊಹಿಸಿರುವ ಶ್ರೀ ಪಟ್ಟಾಭಿರಾಮನ ದೇವಾಲಯ ದ್ರಾವಿಡರ ಶೈಲಿಯಲ್ಲಿದೆ ಈ ದೇವಾಲಯದಲ್ಲಿ ನೆರವೇರುವ ರಾಮೋತ್ಸವ, ಕೊಠಾರೋತ್ಸವ ಪುಷ್ಪ ಬೃಂದಾವನೊತ್ಸವ ಸಂಗೀತೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಶ್ರೀ ಪಟ್ಟಾಭಿರಾಮನ ಅಲಂಕಾರ ವೈಭವವನ್ನು ನೋಡಲು ಕಂಗಳೆರಡು ಸಾಲದು ಶ್ರೀ ಪಟ್ಟಾಭಿರಾಮ ದೇವಲಯ ಪುರಾಣಾದಿಗಳ ಚಾರಿತ್ರಿಕ ಸಾಮ್ರಾಜ್ಯದಲ್ಲಿ ಜಾಜ್ವಲಿತವಾಗಿ ರಾರಾಜಿಸಿದ ಸುಕ್ಷೇತ್ರ ರಾಮನಾಥಪುರ ಇದರ ಅಪ್ರತಿಮ ಉತ್ತುಂಗ ಪ್ರಖ್ಯಾತಿ ಮಹಾತ್ಮೆ ಸುವರ್ಣಾಕ್ಷರದಲ್ಲಿ ಕೆತ್ತಲ್ಪಡುವಂತದ್ದು
ಕೃತಯುಗದಲ್ಲಿ ಸಂವರ್ತಕಾಪುರಿ ತ್ರೇತ್ರಾಯುಗದಲ್ಲಿ ವಾಸವಪುರಿ, ದ್ವಾಪರಾಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರ ಎಂಬ ವಿಖ್ಯಾತವಾದ ಈ ಸುಕ್ಷೇತ್ರದಲ್ಲಿ ದೇವರ ಸನ್ನಿಧಿಗಳು ತುಸು ಎಣಿಸಲದಳ ಮಹಿಮೆಯಂತೂ ವರ್ಣಿಸಲಸದಳ.
ಪವಿತ್ರ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಲ್ಲಿ ಕಾವೇರಿ ನದಿ ಒಳಾಂಗಣದಲ್ಲಿ ಗಾಯಿತ್ರಿಶಿಲೆ, ಗೋಗರ್ಭ, ಕುಮಾರಧಾರತೀರ್ಥ, ಪಟ್ಟಣದಲ್ಲಿ ಶ್ರೀಪಟ್ಟಾಭಿರಾಮಸ್ವಾಮಿ ದೇವಾಲಯ,
ಚತುರ್ಯುಗಮೂರ್ತಿ ರಾಮೇಶ್ವರಸ್ವಾಮಿ, ಶ್ರೀ ಅಗಸ್ಟೇಶ್ವರಸ್ವಾಮಿ ದೇವಸ್ಥಾನ, ಶ್ರೀ ಕಾವೇರಿ ಅಮ್ಮ, ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ವರದಾನ ಬಸವೇಶ್ವರ, ವ್ಯಾಸರಾಯರ ಮಂದಿರ, ಶ್ರೀ ರಾಮಾನುಜರ ಕುಲದೈವ ಶ್ರೀ ನರಸಿಂಹ ಪರಕಾಲ ಮಠ, ಕಾಲುವೆ ಅಮ್ಮ, ಗಣಪತಿ ದೇವಸ್ಥಾನ ಕೋಟುವಾಳಮ್ಮ ದೇವಸ್ಥಾನ ಹಯಗ್ರೀವ ದೇವಸ್ಥಾನ ಹೀಗೆ ರಾಮನಾಥಪುರದಲ್ಲಿ ಸುಮಾರು 65 ದೇವಾಲಯಗಳ ಮೂರ್ತಿಗಳು ಈ ಪಟ್ಟಣದಲ್ಲಿವೆ.
ವರದಿ : ಕುಮಾರಸ್ವಾಮಿ ಲೇಖಕರು ರಾಮನಾಥಪುರ.
