ರಾಮನಾಥಪುರ : ಕೇರಳಾಪುರದ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ಮಹಾ ರಥೋತ್ಸವದ ಹಿನ್ನಲೆಯಲ್ಲಿ ಜಾತ್ರೆಗೆ ಹೋರಿಗಳು, ಎತ್ತುಗಳು ಕರುಗಳನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಂತರ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಿದರು.

ಕೇರಳಾಪುರದಲ್ಲಿ ಫೆಬ್ರವರಿ 26 ರಂದು ಗುರುವಾರ ಹಗಲು 10-30. ರಿಂದ 12 ಗಂಟೆಗೆ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ಮಹಾ ರಥೋತ್ಸವ ಸಂಭ್ರಮದಿಂದ ನಡೆಯುವ ಜಾತ್ರೆಯ ಪ್ರಯುಕ್ತ ದೇವಾಲಯಗಳಲ್ಲಿ ಹೂವಿನ ಅಲಂಕಾರ, ಪೂಜಾ ಕೈಂಕರ್ಯ ನಡೆಯಿತು.

ಈ ಸಂದರ್ಭದಲ್ಲಿ ಪುರೋಹಿತರಾದ ರವಿ, ಮಂಜುನಾಥ್, ಪರಮೇಶ್ , ಭರತ್, ಮಹದೇವ್ ಜಾತ್ರಾ ಮಹೋತ್ಸವದ ಸಮಿತಿಯವರಾದ ಕೆ.ಎಸ್. ಪರಮೇಶ್ವರಯ್ಯ, ಬಿ. ಶಾಂತವೀರಪ್ಪ, ಕೆ.ಎಸ್. ಮಂಹದೇವಪ್ಪ, ಕೆ.ಎ. ರವಿ, ಸಂಗಮೇಶ್ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಪ್ರದಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಐ.ಬಿ. ಕುಮಾರ್ ಮುಂತಾದವರು ತಿಳಿಸಿದರು.
ವರದಿ : ಕುಮಾರಸ್ವಾಮಿ
