ಟಿ.ನರಸೀಪುರ : ಸಮಾಜ ಸೇವೆ ಮಾಡಲು ಧರ್ಮ ಯಾವುದಾದರೇನು…ನಿಷ್ಕಲಂಶ ಸೇವಾ ಗುಣವಿದ್ದರೆ ಸಾಕು.ಅದು ಗೌರವ ಡಾಕ್ಟರೇಟ್ ಪಡೆದ ಮನ್ಸೂರ್ ಅಲಿ ಯವರಲ್ಲಿದೆ ಹಾಗಾಗಿ ಪ್ರಶಸ್ತಿ,ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆಂದು ವಾಟಾಳು ಮಠದ ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ತಾಲ್ಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಮದ್ವಾಟಾಳು ಮಠದಲ್ಲಿ ಸಮಾಜ ಸೇವಕರಾದ ಮನ್ಸೂರ್ ಅಲಿಯವರನ್ನು ಗೌರವಿಸಿ ಮಾತನಾಡಿ ಸಮಾಜದಲ್ಲಿ ಸೇವಾಗುಣ ಇರುವ ವ್ಯಕ್ತಿಗಳು ವಿರಳವಾಗಿದ್ದರೂ ಅಂತಬವರ ಮದ್ಯೆ ಮನ್ಸೂರ್ ಅಲಿಯಂತಹ ಮುಗ್ದ ಮನಸ್ಸಿನ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಗಳು ಕಾಣ ಸಿಗುವುದು ಅಪರೂಪವೆಂದರು.ಇವರ ಸಮಾಜಮುಖಿ ಸೇವೆಗೆ ಈಗಾಗಲೇ ಹಲವಾರು ಪ್ರಶಸ್ತಿ,ಪುರಸ್ಕಾರಗಳು ಲಭಿಸಿವೆ.ಈಗ ಡಾಕ್ಟರೇಟ್ ನೀಡಿದ್ದಾರೆ.ಮುಂದೆ ಮತ್ತಷ್ಚು ಪ್ರಶಸ್ತಿಗಳು ಲಭಿಸಲಿ.
ತಾಲ್ಲೂಕಿನಲ್ಲಿ ಒಳ್ಳೆಯ ಹೆಸರು ಮಾಡಿರುವ ಇವರಿಂದ ಮುಂದೆಯೂ ತಮ್ಮ ಸಮಾಜಮುಖಿ ಸೇವೆಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ.ಇವರ ಸೇವೆಯನ್ನು ಅರ್ಹರು ಮಾತ್ರ ಉಪಯೋಗಿಸಿಕೊಳ್ಳಿ.ಯಾವುದೇ ಕಾರಣಕ್ಕೂ ಅರ್ಹರಲ್ಲದವರು ಸೋಗು ಧರಿಸಿ ಸಹಾಯ ಪಡೆಯಬಾರದು.ಏಕೆಂದರೆ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಆ ಸೇವೆ ಅಲಭ್ಯವಾಗಿ ವಂಚಿತರಾಗುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಮಠದ ಕಿರಿಯ ಸ್ವಾಮಿಗಳಾದ ಶಿವಕುಮಾರ ಸ್ವಾಮೀಜಿ,ಆಪ್ತ ಸಹಾಯಕ ಕುಮಾರ್ ಸೇರಿದಂತೆ ಹಿರಿಯ ಮುಖಂಡ ಅಕ್ಬರ್ ಪಾಷ ಇದ್ದರು.
– ಎಂ.ನಾಗೇಂದ್ರ ಕುಮಾರ್
