ರೈತರಿಗೆ ಮಂಜೂರಾದ ₹10.95 ಕೋಟಿ ವಾಪಸ್ ಕಳುಹಿಸಿದ್ದು ದ್ರೋಹ: ಅಧಿಕಾರಿಗಳ ವಿರುದ್ಧ ಎಚ್.ಡಿ. ರೇವಣ್ಣ ಕಿಡಿ

ಹೇಮಾವತಿ, ಯಗಚಿ, ವಾಟೆಹೊಳೆ ಮತ್ತು ಹಾರಂಗಿ ಜಲಾಶಯಗಳ ಭೂಸ್ವಾಧೀನ ಪ್ರಕರಣಗಳಿಗೆ ರೈತರಿಗೆ ನೀಡಬೇಕಿದ್ದ ₹10.95 ಕೋಟಿ ಹಣವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವುದು ರೈತರಿಗೆ ದ್ರೋಹ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು. ಹಾಸನದಲ್ಲಿ ಭೂ ಮಾಫಿಯಾ, ಎಂ-ಸ್ಯಾಂಡ್ ಲೂಟಿ, ಹಿಮ್ಸ್ ಆಸ್ಪತ್ರೆ ದುಸ್ಥಿತಿ ಹಾಗೂ ಏರ್‌ಪೋರ್ಟ್ ಭೂ ಕಬಳಿಕೆ ಯತ್ನದ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.