ನವದೆಹಲಿ, ಮೇ 28: ಬ್ಲಾಕ್ಚೈನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಇರುವ ಪ್ರಮುಖ ಕಂಪನಿಗಳಲ್ಲಿ ಒಂದಾದ ಭಾರತದ ರಿಲ್ಕೊ ಸಂಸ್ಥೆ ಹಾಗು ಅದರ ಸಿಇಒ ಡಾ. ಸತೀಶ್ ಕುಮಾರ್ ಸೀನಾ (Relcko CEO Dr. Satish Kumar Seena) ಅವರಿಗೆ ಮಾಸ್ಕೋದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಇತ್ತೀಚೆಗೆ ನಡೆದ ಭಾರತ ಮತ್ತು ರಷ್ಯಾ ಆರ್ಥಿಕ ಶೃಂಗಸಭೆಯಲ್ಲಿ ಸೀನಾ ಅವರಿಗೆ 2025ರ ಸಾಲಿನ ಗ್ಲೋಬಲ್ ಲೀಡರ್ ಪ್ರಶಸ್ತಿ ನೀಡಲಾಯಿತು. ಬ್ಲಾಕ್ಚೇನ್ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಬ್ಯುಸಿನೆಸ್ ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ರಷ್ಯಾ ಮತ್ತು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಭಾರತ-ರಷ್ಯಾ ಎಕನಾಮಿಕ್ ಸಮಿಟ್ನಲ್ಲಿ ಎರಡೂ ದೇಶಗಳ ಉದ್ಯಮ ಪರಿಣಿತರು, ನೀತಿರೂಪಕರು ಭಾಗವಹಿಸಿದ್ದರು. ರಷ್ಯಾದ ಮೊದಲ ಉಪ ಪ್ರಧಾನಿ ಡಾ. ಡೆನಿಸ್ ಮಾಂಟುರೋವ್, ಭಾರತಕ್ಕೆ ರಷ್ಯನ್ ರಾಯಭಾರಿಯಾದ ವಲೇರಿ ಖೋಡಝೇವ್, ರಷ್ಯಾ ಅಧ್ಯಕ್ಷರ ಉಖ್ಯ ಸಲಹೆಗಾರ ಆಂಟನ್ ಕೊಬ್ಯಾಕೊವ್ ಮೊದಲಾದ ರಷ್ಯನ್ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಲ್ಕೋ ಕಂಪನಿಯ ಸಾಧನೆಗಳೇನು?
ರಿಯಲ್ ಎಸ್ಟೇಟ್ನಂತಹ ನೈಜ ಜಗತ್ತಿನ ಆಸ್ತಿಗಳನ್ನು ರಿಲ್ಕೋ ಸಮರ್ಪಕ ರೀತಿಯಲ್ಲಿ ಟೋಕನೈಸ್ ಮಾಡುತ್ತಿದೆ. ಬ್ಲಾಕ್ಚೈನ್ ಟೆಕ್ನಾಲಜಿ ಅಳವಡಿಕೆ, ಡೀಫೈ, ಸ್ಮಾರ್ಟ್ ಕಾಂಟ್ರ್ಯಾಕ್ಟ್ಸ್ ಕಾರ್ಯಗಳಲ್ಲಿ ಪಳಗಿರುವ ರಿಲ್ಕೋ, ರಿಯಲ್ ಎಸ್ಟೇಟ್ ಆಸ್ತಿಗಳನ್ನು ಇದೇ ಬ್ಲಾಕ್ಚೈನ್ ಟೆಕ್ನಾಲಜಿ ಬಳಸಿ ಟೋಕನೈಸ್ ಮಾಡಲು ಯಶಸ್ವಿಯಾಗಿದೆ.
2030ರೊಳಗೆ ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಆರ್ಡಬ್ಲ್ಯುಎ ಮಾರುಕಟ್ಟೆ
ರಿಯಲ್ ಎಸ್ಟೇಟ್ನಂತಹ ರಿಯಲ್ ವರ್ಲ್ಡ್ ಅಸೆಟ್ಗಳ ಮಾರುಕಟ್ಟೆ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದ್ದು, ಒಂದು ಅಂದಾಜು ಪ್ರಕಾರ 2030ರೊಳಗೆ ಇದು ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.
ಬ್ಲಾಕ್ಚೈನ್ ಟೆಕ್ನಾಲಜಿ ಮೂಲಕ ರಿಲ್ಕೋ ಸಂಸ್ಥೆಯು ರಿಯಲ್ ಎಸ್ಟೇಟ್ ಆಸ್ತಿಯ ಟೋಕನೈಸ್ ಮಾಡುತ್ತದೆ. ರಿಯಲ್ ಎಸ್ಟೇಟ್ ಆಸ್ತಿಯ ವಹಿವಾಟು ಸಂಪೂರ್ಣ ಡಿಜಿಟಲೀಕರಣಗೊಳಿಸುತ್ತದೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕೆಂದರೆ ಈಗ ನಿವೇಶನ ಅಥವಾ ಫ್ಲಾಟ್ ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಷೇರುಗಳ ರೀತಿ ರಿಯಲ್ ಎಸ್ಟೇಟ್ ಆಸ್ತಿಯನ್ನೂ ಭಾಗಶಃವಾಗಿ ಖರೀದಿಸಬಹುದು.
