ಬೆಂಗಳೂರು: ಮೊಬೈಲ್ ಫೋನ್ಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಮಾಹಿತಿ ಹೊಸ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಸ್ವೀಡನ್ನಲ್ಲಿ ಇತ್ತೀಚೆಗೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದೇ ರೀತಿಯ ನಿಯಮದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದಿನ ದಿನಗಳಲ್ಲಿ ಮಕ್ಕಳು ಆಟಿಕೆಗಳ ಬದಲಿಗೆ ಮೊಬೈಲ್ಗಳನ್ನು ಬಳಸುತ್ತಿದ್ದು, ಹೊರಾಂಗಣ ಆಟಗಳ ಪರಿಕಲ್ಪನೆ ಕಣ್ಮರೆಯಾಗುತ್ತಿದೆ. ಫೋನ್ ಪರದೆಯಿಂದ ಹೊರಹೊಮ್ಮುವ ನೀಲಿ ಬೆಳಕು (Blue Light) ಮತ್ತು ವಿದ್ಯುತ್ಕಾಂತೀಯ ವಿಕಿರಣ (Electromagnetic Radiation) ದೇಹಕ್ಕೆ ಹಾನಿ ಮಾಡುತ್ತವೆ. ವಿಶೇಷವಾಗಿ ಫೋನ್ ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಅತಿಯಾದ ಫೋನ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳು:
- ಕಣ್ಣು ಮಸುಕಾಗುವುದು ಮತ್ತು ಕಿರಿಕಿರಿ
- ನಿದ್ರಾಹೀನತೆ (ಮೆಲಟೋನಿನ್ ಹಾರ್ಮೋನ್ ಮಟ್ಟ ಕುಸಿತ)
- ಕುತ್ತಿಗೆ ಹಾಗೂ ಬೆನ್ನು ನೋವು
- ಒತ್ತಡ, ತಲೆನೋವು
- ಹೃದಯ ಮತ್ತು ಮೆದುಳಿನ ಕಾಯಿಲೆಗಳ ಅಪಾಯ
ರಕ್ಷಣೆ ಪಡೆಯಲು ಸಲಹೆಗಳು:
- ಫೋನ್ ಅನ್ನು ಹಾಸಿಗೆಯಿಂದ ದೂರವಿಡಿ
- ಫೋನ್ ಬಳಕೆಗೆ ನಿಗದಿತ ಸಮಯ ನಿಗದಿಪಡಿಸಿ
- ಅಧ್ಯಯನ ಅಥವಾ ಕೆಲಸದ ವೇಳೆಯಲ್ಲಿ ಫೋನ್ ಬಳಸಬೇಡಿ
ತಜ್ಞರು, ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಡುವುದರಿಂದ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎಂದು ತಿಳಿಸಿದರು.
