ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಹೆಲಿಕಾಪ್ಟರ್ನಲ್ಲಿ ಕೂತು ಮೇಲ್ಬಾಗದಿಂದ ಚಿತ್ರೀಕರಿಸಲಾಗಿದೆ.ವಿಡಿಯೋದಲ್ಲಿ ಡಜನ್ಗಟ್ಟಲೇ ದೈತ್ಯ ಅನಕೊಂಡಗಳು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು.
ಒಂದಲ್ಲ, ಹಲವಾರು ಬೃಹತ್ ಕಪ್ಪು ಅನಕೊಂಡಗಳು ಅಮೆಜಾನ್ ಕಾಡಿನ ಮಧ್ಯದಲ್ಲಿ ನಿರ್ಮಿಸಲಾದ ಕಾಲುವೆಯಲ್ಲಿ ಸುತ್ತುತ್ತಿವೆ. ಈ ಅನಕೊಂಡಗಳನ್ನು ಹೆಲಿಕಾಪ್ಟರ್ನಲ್ಲಿ ಕೂತು ಎತ್ತರದಿಂದ ನೋಡಿದಾಗ ನೀರಿನಲ್ಲಿ ಈಜುತ್ತಿರುವುದು ಗೋಚರಿಸುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅನಕೊಂಡ, ಹಾವಿನ ಜಾತಿಯಲ್ಲೇ ಅತಿ ದೊಡ್ಡ ಹಾವು. ಇದನ್ನು ನೋಡಿದರೆ ಯಾರಿಗಾದರೂ ಉಸಿರುಗಟ್ಟುವುದು ಖಚಿತ.
ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯವು ತುಂಬಾ ಭಯಾನಕವಾಗಿ ಕಾಣುವುದಲ್ಲದೆ, ಮೈಯೆಲ್ಲಾ ಪುಳಕವಾಗುವಂತೆ ಮಾಡುತ್ತದೆ. ಸದ್ಯ ವಿಡಿಯೋ ನೋಡಿದ ಜನರು ಅದನ್ನು ‘ಅನಕೊಂಡ ನದಿ’ ಎಂದೇ ಕರೆಯುತ್ತಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಈ ಫೋಟೋ ರಿಯಲ್ ಅಲ್ಲ, ಹೌದು, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ.
