ಕೆ.ಆರ್.ಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧುಘಟ್ಟ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪಾಮಹಾದೇವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿಯ ಹಿಂದಿನ ಅಧ್ಯಕ್ಷೆ ಲಾವಣ್ಯಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ರೂಪಮಹಾದೇವ್ ಅವರನ್ನು ಹೊರತುಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ರೂಪಾ ಮಹಾದೇವ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಎಇಇ ಬೋರಯ್ಯ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಗಳಾಗಿ ತಾ.ಪಂ. ವ್ಯವಸ್ಥಾಪಕ ಅನಿಲ್ ಬಾಬು, ಪಿಡಿಓ ಕೆ.ಜೆ.ವಾಣಿ ಕರ್ತವ್ಯ ನಿರ್ವಹಣೆ ಮಾಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೂಪಾಮಹಾದೇವ್ ರವರನ್ನು ಉಪಾಧ್ಯಕ್ಷ ಕೆ.ಆರ್. ಸೋಮಶೇಖರ್, ಪಿಡಿಓ ಕೆ.ಜೆ.ವಾಣಿ, ಸದಸ್ಯರಾದ ದಿವ್ಯ ಗಿರೀಶ್, ಆಶಾಸೋಮಶೇಖರ್, ನಂಜಪ್ಪ, ಲಾವಣ್ಯಕುಮಾರ್, ಜ್ಯೋತಿ ನಾಗರಾಜು, ಸುಮಲತಾಚೆಲುವರಾಜು, ಎಸ್.ಸಿ.ನಾಗೇಶ್, ನವೀನ್ಕುಮಾರ್, ರಾಜೇಶ್ವರಿನರಸಿಂಹ, ಶಾಂಭವಿಮಂಜು ಮುಖಂಡರಾದ ಎಸ್.ಐ.ಗಿರೀಶ್, ಬೇಲದಕೆರೆ ಮರೀಗೌಡ, ಶೆಟ್ಟಿನಾಯಕನಕೊಪ್ಪಲು ಸೋಮಶೇಖರ್, ಅಂಗಡಿ ನವೀನ್, ಸೋಮಶೇಖರ್, ಕೃಷ್ಣೇಗೌಡ, ಸಚಿನ್ಕೃಷ್ಣ, ಉಯ್ಗೋನಹಳ್ಳಿ ಕಿಟ್ಟಿ, ಮಂಜೇಗೌಡ, ಅತ್ತಿಮಾರನಹಳ್ಳಿ ಹರೀಶ್, ಯೋಗೇಶ್, ಆನಂದ್, ಮಾರುತಿನಗರ ಹರೀಶ್, ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

ನೂತನ ಅಧ್ಯಕ್ಷೆ ರೂಪಾಮಹಾದೇವ್ ಮಾತನಾಡಿ, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಲು ಕಾರಣಕರ್ತರಾದ ಶಾಸಕರಾದ ಹೆಚ್ ಟಿ ಮಂಜಣ್ಣ, ಹೆಚ್.ಟಿ.ಲೋಕೇಶ್ ಹಾಗೂ ಎಲ್ಲಾ ಸದಸ್ಯರುಗಳಿಗೆ ನಮ್ಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ, ಹಿತೈಷಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿಯನ್ನು ವಹಿಸುತ್ತೇನೆ. ರಸ್ತೆ, ಚರಂಡಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಸರಬರಾಜು, ಬೀದಿ ದೀಪಗಳ ಅಭಿವೃದ್ಧಿ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ವರದಿ,ಎಸ್ ರವಿ ಹೊನ್ನೇನಹಳ್ಳಿ
