ಪಾಕಿಸ್ತಾನಕ್ಕೆ ಭೇಟಿ ನೀಡಬೇಡಿ- ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ರಷ್ಯಾ

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಲೇ ಇರುವ ಪಾಕಿಸ್ತಾನ ಇದೀಗ ಕಾಶ್ಮೀರದಲ್ಲಿನ ಉಗ್ರರ ದಾಳಿಯ ಬಳಿಕ ಮತ್ತೊಮ್ಮೆ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ರಷ್ಯಾ ರಾಯಭಾರ ಕಚೇರಿ ಕೂಡ ತಮ್ಮ ದೇಶದ ಪ್ರಜೆಗಳಿಗೆ ಪಾಕಿಸ್ತಾನಕ್ಕೆ ಸದ್ಯದ ಮಟ್ಟಿಗೆ ಪ್ರಯಾಣ ಬೆಳೆಸಬೇಡಿ ಎಂದು ಸೂಚನೆ ನೀಡಿದೆ. “ಪಾಕಿಸ್ತಾನ-ಭಾರತದ ಸಂಬಂಧಗಳಲ್ಲಿ ಹೊಸ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದ ನಾಗರಿಕರು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಯಬೇಕೆಂದು ನಾವು ಶಿಫಾರಸು ಮಾಡುತ್ತೇವೆ.” ಎಂದು ಹೇಳಿದೆ.