ಗೋಕರ್ಣ, ಜುಲೈ 12 – ರಾಮತೀರ್ಥ ಗುಡ್ಡದ ಕಾಡಿನ ಗುಹೆಯೊಂದರಲ್ಲಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ. ದೇವಭಕ್ತಿ ಹಾಗೂ ಧ್ಯಾನಕ್ಕಾಗಿ ಗೋವಾದಿಂದ ಗೋಕರ್ಣಕ್ಕೆ ಬಂದ ನೀನಾ ಕುಟಿನಾ ಎಂಬ 40 ವರ್ಷದ ಮಹಿಳೆ, ತನ್ನ ಆರು ವರ್ಷದ ಮಗಳು ಪ್ರೇಮಾ ಹಾಗೂ ನಾಲ್ಕು ವರ್ಷದ ಮಗಳು ಅಮಾ ಜೊತೆ ಕಾಡಿನಲ್ಲಿ ವಾಸಿಸುತ್ತಿದ್ದಳು.
ಪೊಲೀಸರು ಗಸ್ತು ತಿರುಗುವ ಸಂದರ್ಭದಲ್ಲಿ ಗುಡ್ಡದ ತುದಿಯಲ್ಲಿ ಅಪರಿಚಿತರು ವಾಸವಿರುವುದು ಗಮನಿಸಿ, ತನಿಖೆ ನಡೆಸಿದಾಗ ಗುಹೆಯ ಕುಟೀರದಲ್ಲಿ ನೀನಾ ಹಾಗೂ ಮಕ್ಕಳನ್ನು ಕಂಡುಬಂದಿತು. ಭೂಕುಸಿತದ ಅಪಾಯ, ವಿಷಕಾರಿ ಜಂತುಗಳ ಭೀತಿಯಿಂದ ಆ ಪ್ರದೇಶ ಅಪಾಯಕಾರಿ ಎಂಬುದನ್ನು ತಿಳಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಇದನ್ನು ಓದಿ: BIG NEWS: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ -“ತುಂಬಿದ ಕೊಡ ತುಳಿಕಿತಲೇ ಪರಾಕ್” – “ಸಿಎಂ ಬದಲಾವಣೆಯ ಗೂಡಾರ್ಥ” ಎಂದ ವಿಶ್ಲೇಷಕರು
ಮಹಿಳೆಯ ಇಚ್ಛೆಯಂತೆ ಅವರನ್ನು ಕುಮಟಾದ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ್ ಫೌಂಡೇಶನ್ನ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಕರೆದೊಯ್ಯಲಾಯಿತು. ಪಾಸ್ಪೋರ್ಟ್ ಮತ್ತು ವೀಸಾ ಮಾಹಿತಿ ನೀಡಲು ಪ್ರಥಮದಲ್ಲಿ ನಿರಾಕರಿಸಿದ ನೀನಾ, ಕೊನೆಗೆ ಗುಹೆಯ ಸುತ್ತಮುತ್ತ ಶೋಧಿಸಿದ ವೇಳೆ ಆ ದಾಖಲೆಗಳು ಪತ್ತೆಯಾದವು. ಪರಿಶೀಲನೆಯಾಗಿರ, ಅವರ ವೀಸಾ 2017ರ ಏಪ್ರಿಲ್ನಲ್ಲಿ ಮುಕ್ತಾಯವಾಗಿರುವುದು ತಿಳಿದುಬಂದಿದೆ.
ಈ ಹಿನ್ನೆಲೆ, ಎಫ್ಆರ್ಆರ್ಒ (Foreigners Regional Registration Office) ಬೆಂಗಳೂರು ಕಚೇರಿಯೊಂದಿಗೆ ಸಂಪರ್ಕಿಸಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ನೀನಾ ಮತ್ತು ಆಕೆಯ ಮಕ್ಕಳನ್ನು ಜುಲೈ 14ರಂದು ಬೆಂಗಳೂರಿನ ಎಫ್ಆರ್ಆರ್ಒ ಕಚೇರಿಗೆ ಹಾಜರುಪಡಿಸಲಾಗಿದ್ದು, ಅವರನ್ನು ರಷ್ಯಾಕ್ಕೆ ಮರಳಿ ಕಳುಹಿಸಲು ಕ್ರಮ ಜರಗಿಸಲಾಗಿದೆ.

[…] ಇದನ್ನು ಓದು: ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸವಿದ್ದ ರಷ್… […]
[…] ಇದನ್ನು ಓದಿ: ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸವಿದ್ದ ರಷ್… […]