ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಭಾರತದ ಪರ ಯಾರೂ ಮಾಡಿರದ ಸಾಧನೆಯನ್ನು ಮಾಡಿ ಗಮನ ಸೆಳೆದಿದ್ದಾರೆ. ಸಚಿನ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ತಮಿಳುನಾಡು ಕ್ರಿಕೆಟಿಗ ಸಾಯಿ ಸುದರ್ಶನ್ ಚುಟುಕು ಕ್ರಿಕೆಟ್ನಲ್ಲಿ ವೇಗವಾಗಿ 2000 ರನ್ ಪೂರ್ಣಗೊಳಿಸಿದ್ದಾರೆ.
ಇಷ್ಟು ರನ್ ಪೂರೈಸಲು ತೆಗೆದುಕೊಂಡಿದ್ದು ಕೇವಲ 54 ಇನ್ನಿಂಗ್ಸ್ಗಳು ಮಾತ್ರ.
ಟಿ20ಯಲ್ಲಿ ವೇಗವಾಗಿ 2000 ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಅಗ್ರಸ್ಥಾನದಲ್ಲಿದ್ದಾರೆ.
ಶಾನ್ ಮಾರ್ಷ್ 53 ಟಿ20 ಇನ್ನಿಂಗ್ಸ್ಗಳಲ್ಲಿ ಎರಡು ಸಾವಿರ ರನ್ಗಳ ಗಡಿ ದಾಟಿದ್ದಾರೆ. ಇವರಿಬ್ಬರ ನಂತರದ ಸ್ಥಾನದಲ್ಲಿ ಕ್ರಮವಾಗಿ ಬ್ರಾಡ್ ಹಗ್, ಮಾರ್ಕಸ್ ಟ್ರೆಸ್ಕೋತಿಕ್, ಮೊಹಮ್ಮದ್ ವಾಸೀಮ್ ಇದ್ದಾರೆ. ಈ ಮೂವರು 58 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ಆಸೀಸ್ನ ಡಿಆರ್ಕಿ ಶಾರ್ಟ್ ಅವರು ತಲಾ 58 ಇನ್ನಿಂಗ್ಸ್ಗಳಲ್ಲಿ ಮೈಲಿಗಲ್ಲು ತಲುಪಿದ್ದರು. ಸಾಯಿ ಸುದರ್ಶನ್ ಈಗ ಅಮೋಘ ಆಟದೊಂದಿಗೆ ಸಚಿನ್ ದಾಖಲೆ ಮುರಿದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
