ಸಕಲೇಶಪುರ- ತೋಟಕ್ಕೆಂದು ಹೋರಟಿದ್ದ ರೈತನೋರ್ವನ ಮೇಲೆ ಆನೆ ದಾಳಿ ನಡೆಸಿದ್ದು, ಗಂಭೀರ ಗಾಯವಾದ ಘಟನೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿ ಹೆಬ್ಬನಹಳ್ಳಿ ಗ್ರಾಮದ ರಾಜಣ್ಣ (60) . ಮುಂಜಾನೆಯೇ ತೋಟಕ್ಕೆಂದು ಹೊರಟಿದ್ದ ರಾಜಣ್ಣ ಕಾಡಾನೆ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಕಿವಿ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
