ಸಕಲೇಶಪುರ- ಮಲೆನಾಡಿಗರ ಜೀವನದಿಯಾಗಿರುವ ಹೇಮಾವತಿ ನದಿ ಕಳೆದ ನಾಲ್ಕು–ಐದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಂದು ಮಂಗಳವಾರ ತುಂಬಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ ಅವರು ನದಿಗೆ ಬಾಗಿನ ಅರ್ಪಿಸಿದರು.
ಪಟ್ಟಣದ ಹೇಮಾವತಿ ಸೇತುವೆಯ ಮೇಲೆ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜಕುಮಾರ್ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್, ಸಬ ಭಾಸ್ಕರ್, ಹೆತ್ತೂರು ದಿವಾಕರ್, ಹೆತ್ತೂರು ಸುದರ್ಶನ್, ಜಾ ತಳ್ಳಿ ಪುಟ್ಟಸ್ವಾಮಿ ಗೌಡ್ರು, ಸುಮನ್ ಹೆತ್ತೂರು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗಭೂಷಣ್, ಪ್ರಸಾದ್ ಗೌಡ ವಳಲಹಳ್ಳಿ, ಪುರಸಭಾ ಸದಸ್ಯರಾದ ಎಸ್.ಡಿ. ಆದರ್ಶ್, ಮುಕೇಶ್ ಶೆಟ್ಟಿ, ಎಂ.ಬಿ. ಉಮೇಶ್, ಇಸ್ರಾರ್, ವಿದ್ಯಾ ಪ್ರಭಾಕರ್, ಎಸ್.ಕೆ. ಸೂರ್ಯ, ಸರಿತಾ ಗಿರೀಶ್, ಜೆಡಿಎಸ್ ಮುಖಂಡರಾದ ರಮೇಶ್ ಕರಗೂರು, ಮಲ್ಲೇಶ್ ಹೆತ್ತೂರು, ಸುರೇಶ್ ಆಳ್ವ, ರೋಹಿತ್ ಬಾಳು ಮತ್ತಿತರರು ಉಪಸ್ಥಿತರಿದ್ದರು.
🌊 ಹೇಮಾವತಿ ನದಿಯ ತೀರದಲ್ಲಿ ನಡೆದ ಈ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಸ್ಥಳೀಯರು ಕೂಡ ಸಾಕ್ಷಿಯಾಗಿದ್ದರು.
