ಸಕಲೇಶಪುರ: ಮೋದಿಯವರು ಇಡೀ ದೇಶದಲ್ಲಿ ಪಾನ ನಿಷೇಧ ಮಾಡಿದರೆ, ನಾನು ಅವರಿಗೆ ಸಾವಿರ ಸಲಾಂ ಹೊಡೆಯುತ್ತೇನೆ-ಬಿ.ಆರ್. ಪಾಟೀಲ್ ದೃಢ

ಸಕಲೇಶಪುರದಲ್ಲಿ ‘ಡ್ರಗ್ಸ್ ಮುಕ್ತ ಭಾರತ’ ಆಂದೋಲನ ಕಾರ್ಯಕ್ರಮದಲ್ಲಿ ಬಿ.ಆರ್. ಪಾಟೀಲ್ ಭಾಗವಹಿಸಿ ಮದ್ಯ ಮತ್ತು ಡ್ರಗ್ಸ್ ನಿಷೇಧಕ್ಕೆ ದೃಢ ನಿಲುವು ತೋರಿದರು. ಅವರು ದೇಶಾದ್ಯಾಂತ ಪಾನ ನಿಷೇಧ ಜಾರಿಗೆ ತರಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಆಂದೋಲನವನ್ನು ರಾಷ್ಟ್ರವ್ಯಾಪಿ ಚಳವಳಿಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.