ಕೆ.ಆರ್.ಪೇಟೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಪಂಚಭೂತಗಳಲ್ಲಿ ದೇವರನ್ನು ಕಾಣುವ ಸಂಸತಿ ನಮ್ಮದು. ತೆಂಗು,ಬನ್ನಿ ಮರ ಸೇರಿದಂತೆ ಇನ್ನಿತರ ಮರಗಳನ್ನು ದೈವ ಸ್ವರೂಪಿಯಾಗಿ ಕಂಡರು ಪರಿಸರವನ್ನು ನಾಶ ಮಾಡುವುದನ್ನು ಮನುಷ್ಯ ಬಿಟ್ಟಿಲ್ಲ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸಂಗೀತ ದಿನೇಶ್ ಹೇಳಿದರು.
ತಾಲ್ಲೂಕು ಹರಿಹರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹರಿಹರಪುರ ವಲಯದಿಂದ ಹಾಗೂ ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,ರಸ್ತೆಗಳ ಅಗಲೀಕರಣ, ಕೆರೆಗಳ ಮುಚ್ಚುವಿಕೆ, ಕಾಡಿನ ನಾಶ ಇದೇ ರೀತಿ ಪ್ರಕೃತಿ ನಾಶ ಆಗುತ್ತಿದೆ. ಪ್ರಾಣಿ ಸಂಕುಲ ಮನುಷ್ಯ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ.ಇದನ್ನು ತಪ್ಪಿಸಬೇಕಾದರೆ ಪ್ರತಿಯೊಬ್ಬರೂ ಗಿಡ ನೆಟ್ಟು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಅಗತ್ಯವನ್ನು ನಮಗೆ ಕಲಿಸುತ್ತದೆ ಎಂದು ಸಂಗೀತ ದಿನೇಶ್ ತಿಳಿಸಿದರು.
ಬಳಿಕ ಮಾತನಾಡಿದ ಕೃಷಿ ಮೇಲ್ವಿಚಾರಕ ಪ್ರವೀಣ್ ನಮ್ಮ ಜನರು ಪರಿಸರ ದಿನ ಅಥವಾ ಈ ತರದ ವಿಶೇಷ ಕಾರ್ಯಕ್ರಮಗಳಲ್ಲಿ ಸಸಿ ನೆಟ್ಟು ಆಚರಿಸುವುದು ಜಾಗತಿಕವಾಗಿ ಇರುವ ವಾಡಿಕೆಯಾಗಿದೆ.ಆದರೆ ಇದರ ಹೊರತಾಗಿ ಪರಿಸರಕ್ಕೆ ಅಥವಾ ಭೂಮಿಗೆ ಸವಾಲಾಗಿರುವ ಹವಾಮಾನ ಬದಲಾವಣೆ, ಪ್ಲಾಸ್ಟಿಕ್ ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ನಾವು ಚಚಿರ್ಸಿ ಪರಿಹಾರ ಕಂಡುಕೊಳ್ಳಬೇಕಿದೆ.ನಮ್ಮ ಮಕ್ಕಳಿಗೆ ಇಂದಿನಿಂದಲೆ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸಿ ವಿಶ್ವ ಪರಿಸರ ದಿನಕ್ಕೆ ತಮ್ಮದೇ ಕೊಡುಗೆ ನೀಡಬಹುದು ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಪರಿಸರ ಕಾರ್ಯಕ್ರಮ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ವಿವಿಧ ಜಾತಿ ಎಲೆಗಳ ಗುರುತಿಸುವಿಕೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕ ರಮೇಶ್,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಮೇಲ್ವಿಚಾರಕ ಪ್ರವೀಣ್, ಸಹ ಶಿಕ್ಷಕ ಸುಷ್ಮಾ, ರುಕ್ಮಿಣಿ ವೆಂಕಟೇಶ್, ರಶ್ಮಿ, ಸೇರಿದಂತೆ ವಲಯದ ಸೇವಾ ಪ್ರತಿನಿಧಿಗಳು ಶಾಲಾ ಮಕ್ಕಳಿದ್ದರೂ.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
