ಬೆಂಗಳೂರು, 22 ಮೇ 2025 – ಭಾರತೀಯ ರಿಯಲ್ ಎಸ್ಟೇಟ್ ವಲಯದಲ್ಲಿ ನೂರಾರು ಯಶಸ್ವಿ ಯೋಜನೆಗಳನ್ನು ರೂಪಿಸಿ ಹೆಸರು ಗಳಿಸಿರುವ ಸತ್ತ್ವ ಗ್ರೂಪ್, ಇದೀಗ ನೈಋತ್ಯ ಬೆಂಗಳೂರು (ಆರ್.ಆರ್. ನಗರ) ಯಲ್ಲಿ ಹೊಸತನದಿಂದ ಕೂಡಿದ ವಸತಿ ಯೋಜನೆ ‘ಸತ್ತ್ವ ಸಿಂಪ್ಲಿಸಿಟಿ’ ಯನ್ನು ಅನಾವರಣಗೊಳಿಸಿದೆ. 4 ಎಕರೆ ಹಸಿರಿನ ಪರಿಸರದಲ್ಲಿ ನಿರ್ಮಿತವಾಗುತ್ತಿರುವ ಈ ಯೋಜನೆ, ಸ್ಮಾರ್ಟ್ ಮತ್ತು ಸುಸ್ಥಿರ ನಗರ ಜೀವನದ ಸಂಕೇತವಾಗಿದ್ದು, ಸ್ಟುಡಿಯೋ ಮತ್ತು 1BHK ಅಪಾರ್ಟ್ಮೆಂಟ್ಗಳೊಂದಿಗೆ ಸಮಕಾಲೀನ ಮನೆ ಖರೀದಿದಾರರ ಅಗತ್ಯಗಳಿಗೆ ತಕ್ಕ ವಿಶಿಷ್ಟ ಪರಿಹಾರವನ್ನು ನೀಡುತ್ತದೆ.
265 ಸೂಕ್ಷ್ಮವಾಗಿ ವಿನ್ಯಾಸಗೊಳ್ಳಲಾದ ನಿವಾಸಗಳು, 70% ಮುಕ್ತ ಪ್ರದೇಶ, ಸ್ಮಾರ್ಟ್ ಹೋಮ್ ಆಟೊಮೇಷನ್, ಮಳೆ ನೀರಿನ ಸಂಗ್ರಹಣೆ, ಸೌರಶಕ್ತಿ ಉಪಯೋಗ ಹಾಗೂ ಡಿಜಿಟಲ್ ಕೆಲಸದ ಸ್ಥಳಗಳನ್ನು ಒಳಗೊಂಡಿರುವ ಈ ಯೋಜನೆ, ತಂತ್ರಜ್ಞಾನ ವಲಯದ ವೃತ್ತಿಪರರಿಂದ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ತಕ್ಕಂತಹ ವಾಸಸ್ಥಳವಾಗಿದೆ.
ಸತ್ತ್ವ ಗ್ರೂಪ್ನ ಮಾರಾಟ ಮತ್ತು CRM ವಿಭಾಗದ ಅಧ್ಯಕ್ಷೆ ಕರಿಷ್ಮಾ ಸಿಂಗ್ ಅವರು ಈ ಕುರಿತು ಮಾತನಾಡುತ್ತಾ, “ಇಂದಿನ ಜನಾಂಗವು ಸುಸ್ಥಿರತೆ, ಸಂಪರ್ಕ ಮತ್ತು ಸಮುದಾಯ ತತ್ವಗಳಿಗೆ ಹೆಚ್ಚು ಬೆಲೆ ನೀಡುತ್ತಿದೆ. ಸಿಂಪ್ಲಿಸಿಟಿಯು ಈ ಎಲ್ಲಾ ಅಂಶಗಳನ್ನು ಸಮರ್ಪಕವಾಗಿ ಒಳಗೊಂಡಿದೆ,” ಎಂದು ಹೇಳಿದರು.

ನೈಋತ್ಯ ಬೆಂಗಳೂರು ಈಗ ತಂತ್ರಜ್ಞಾನ ವಲಯ, ಶಿಕ್ಷಣ ಸಂಸ್ಥೆಗಳು, ಮೆಟ್ರೋ ಸಂಪರ್ಕ ಮತ್ತು ಆಸ್ತಿ ಮೌಲ್ಯವರ್ಧನೆ—all in one—ನ್ನು ಒದಗಿಸುತ್ತಿರುವ ಪ್ರದೇಶವಾಗಿ ಬೆಳೆಯುತ್ತಿದ್ದು, ಈ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ ₹8,000 ರಷ್ಟು ಸರಾಸರಿ ಬೆಲೆ ಏರಿಕೆ, 17% ಯಷ್ಟು ವರ್ಷಾವಾರು ಬೆಳವಣಿಗೆ, 54% ಹೊಸ ವಸತಿ ಯೋಜನೆಗಳ ಪಾಲು, ಇತ್ಯಾದಿ ಅಂಶಗಳು ಈ ಮಾರ್ಕೆಟ್ನ ಭವಿಷ್ಯವನ್ನೇ ಸೂಚಿಸುತ್ತಿವೆ.
ಎಲ್ಲೆಲ್ಲಿ ….???
-
ಬೆಂಗಳೂರು ವಿಶ್ವವಿದ್ಯಾಲಯ, PES, RVCE ಮುಂತಾದ ಸಂಸ್ಥೆಗಳ ಬಳಿಯಲ್ಲಿ
-
ಮೈಂಡ್ಟ್ರೀ, ಆಕ್ಸೆಂಚರ್, ಎಂಫಾಸಿಸ್ ಹತ್ತಿರ
-
ಪಟ್ಟಣಗೆರೆ ಮೆಟ್ರೋ ನಿಲ್ದಾಣಕ್ಕೆ ಹತ್ತಿರ
-
ಪ್ಯಾನ್ ಬ್ಯಾಂಗ್ಲೋರ್ ಸಂಪರ್ಕ
ಸತ್ತ್ವ ಸಿಂಪ್ಲಿಸಿಟಿ ಇಂದಿನ ಹಾಗೂ ಭವಿಷ್ಯದ ನಗರ ನಿವಾಸದ ಕನಸನ್ನು ನನಸಾಗಿಸಲು ಸಜ್ಜಾಗಿದೆ.
