ಹಾಸನ, ಜುಲೈ 1: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪನಾ ದಿನದ ಪ್ರಯುಕ್ತ, ಹಾಸನದ ಎಸ್ಬಿಐ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಕನ್ಹಯ್ಯಾ ಲಾಲ್ ಗೋಪಾಲೀ ಮತ್ತು ಮುಖ್ಯ ವ್ಯವಸ್ಥಾಪಕರಾದ ವಲ್ಲೀಶ್ ವೈ.ಸಿ ರವರನ್ನು ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಗೌರವಿಸಲಾಯಿತು.
ಹಾಸನದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಈ ಇಬ್ಬರು ಅಧಿಕಾರಿಗಳನ್ನ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷರಾದ ಹೆಚ್.ಡಿ. ವಜ್ರಕುಮಾರ್, ಕಾರ್ಯದರ್ಶಿ ಕೆ.ಎಸ್. ಯೋಗೇಶ್, ಖಜಾಂಚಿ ಗವಿಗೌಡ ಮತ್ತು ಹಿರಿಯ ಸದಸ್ಯರಾದ ರೋ|| ಎಂ.ಸಿ. ರಾಜಣ್ಣ, ರೋ|| ಅಮೃತ್ ಕುಮಾರ್ ಹಾಗೂ ರೋ|| ಸಿದ್ದನಂಜಪ್ಪ ರವರು ಉಪಸ್ಥಿತರಿದ್ದರು.
ಬ್ಯಾಂಕಿಂಗ್ ಸೇವೆಯಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಎಸ್ಬಿಐ ಸಿಬ್ಬಂದಿಗೆ ರೋಟರಿ ಸಂಸ್ಥೆಯಿಂದ ಮೆಚ್ಚುಗೆ ವ್ಯಕ್ತವಾಯಿತು.
