ಹಾಸನ– ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ಪದಗ್ರಹಣ ಕಾರ್ಯಕ್ರಮವು ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಸನ್ ಲೀಜನ್ ಸಂಸ್ಥೆಯ ಅಧ್ಯಕ್ಷರಾಗಿ ಶ್ರೀಮತಿ ಭಾನುಮತಿ ಯವರು ಅಧ್ಯಕ್ಷರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಹಾಗೆಯೇ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಸನ್ ಲೀಜನ್ನ ನೂತನ ಅಧ್ಯಕ್ಷರಾಗಿ ರವಿ ಕಿತ್ತನ್ಕೆರೆ ಇವರು ಪ್ರಮಾಣವಚನ ಸ್ವೀಕರಿಸಿದರು. ನೂತನ ಕಾರ್ಯದರ್ಶಿಯಾಗಿ ಅರ್ಥ ಆರ್ತುರ್ ಪಿಕಾರ್ಡೊ ಮತ್ತು ಭಾಗ್ಯ ಖಜಾಂಚಿಯಾಗಿ ಪದ್ಮನಾಭ ಮತ್ತು ಶ್ವೇತಾ ನೇಮಕಗೊಂಡರು.
sci ನಾ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿ, ನಮ್ಮ ಈ ಸಂಸ್ಥೆಯು ಸಾಮಾಜಿಕ ಕೆಲಸ ಕಾರ್ಯಗಳನ್ನು ನಿಸ್ವಾರ್ಥ ಮನೋಭಾವದಿಂದ ಮಾಡುತ್ತಾ ಬಂದಿರುತ್ತದೆ ಹಾಗೂ ಸಮಾಜದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸುತ್ತ, ಸಮಸ್ಯೆಗಳನ್ನು ಎದುರಿಸುತ್ತಾ ಇದುವರೆಗೂ ನಾಗರೀಕ ವಲಯದಲ್ಲಿ ಬಹಳ ಉತ್ತಮ ಕೆಲಸವನ್ನು ನಿರ್ವಹಿಸುತ್ತಾ ಬಂದಿರುತ್ತದೆ . ಇಂದು ಹೊಸದಾಗಿ ಉದ್ಘಾಟಿಸಲಾಗಿರುವ ಸನ್ ಶೈನ್ ಟೀಮ್ ನ ಅಧ್ಯಕ್ಷ ಭಾನುಮತಿ ಹಾಗೂ ಅವರ ತಂಡದವರು ತುಂಬಾ ಹೆಚ್ಚಿನ ಮಟ್ಟದ ಸಮಾಜ ಸೇವೆ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಿ ಸಫಲರಾಗುತ್ತಾ ಎಂದು ನಾವು ನಂಬಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ ಶುಭಾಷಯಗಳನ್ನು ತಿಳಿಸಿದರು.

ರಾಷ್ಟ್ರೀಯ ಉಪಾಧ್ಯಕ್ಷರು ಸಂಸ್ಥೆಯ ನೂತನ ಪದಾಧಿಕಾರಿಗಳೆಲ್ಲರಿಗೂ ಬ್ಯಾಡ್ಜ್ ನೀಡಿ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ,ಇನ್ನರ್ವಿಲ್, ಹ್ಯೂಮನ್ ರೈಟ್ಸ್, ಶಾರದಾ ಕಲಾಸಂಘ ಹಾಗೂ ಇತರೆ ಸಂಘಗಳಿಂದ ಪದಾಧಿಕಾರಿಗಳು ಆಗಮಿಸಿದ್ದರು ಹಾಗೂ ಎಲ್ಲರಿಗೂ ಶುಭಾಶಯಗಳು ಕೋರಿದರು.
SCI ಸನ್ ಶೈನ್ ಸಂಸ್ಥೆಯ ನೂತನ ಪದಾಧಿಕಾರಿ ಹಾಗೂ ನಿರ್ದೇಶಕರಾಗಿ ಚೈತ್ರ, ಯಶೋಧ, ಸಪ್ನ, ಸುನಿತಾ, ರೂಪ, ನೀಲಮ್ಮ, ಚೇತನ, ಸಾವಿತ್ರಿ, ಮಮತಾ, ಸುಲೋಚನಾ, ಹರಣಿ ಕುಮಾರಿ, ಸಿಂಚನ, ಕಲಾವತಿ, ಉಮಾಕ್ಷಿ, ಜಾಕಿರ ಬಾನು, ಬವಿತ, ಬಬಿತ, ಸುಂದ್ರಮ್ಮ, ವೀಣಾ, ಅನು, ಚಂದ್ರಕಲಾ ಆಯ್ಕೆಗೊಂಡರು.
ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಹೊಂದಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ MR ಜಯೇಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾದ ಗೀತಾ ಲತಾ ರವರು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪಾಷರವರು, sci ನ್ಯಾಷನಲ್ ಕೋ ಆರ್ಡಿನೇಟರ್ ನಾಗೇಶ್, ಜೆಸಿ ಪ್ರಸಾದ್, ಶಬ್ಬೀರ್, ನಾಗರಾಜ್ ಇವರ ಉಪಸ್ಥಿತರಿದ್ದರು.
