ತುಮಕೂರು:ರಾಜ್ಯ ವಕೀಲರ ಪರಿಷತ್ತಿಗೆ ದಿನಾಂಕ:11-03-2026ರಂದು ನಡೆಯುವ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿರುವ ರಾಜ್ಯ ಉಚ್ಛನ್ಯಾಯಾಲಯದ ಹಿರಿಯ ವಕೀಲರಾದ ಎಂ.ಎನ್.ಮಧುಸೂಧನ್ ರವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಆಗಮಿಸಿ ಎಲ್ಲ ಹಿರಿಯ,ಕಿರಿಯ,ಮಹಿಳಾ ವಕೀಲರಲ್ಲಿ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್, ಮಂಜುನಾಥ್, ದೊರೆಸ್ವಾಮಿ, ರಾಜೇಂದ್ರ, ಟಿ.ಎಂ.ಧನಂಜಯ,ಬಿ.ಎಂ.ಸಿಂಧು,ಶ್ರೀನಿವಾಸ್ಮೂರ್ತಿ.ಕೆ.ವಿ,ನರಸಿಂಹರಾಜು,ಹರೀಶ್,ನವೀನ್,ಶ್ರೀಮತಿ ಸುಮನ್, ಸುಭಾಷ್.ಪಿ,ಷಫಿ, ಸೇರಿದಂತೆ ಎಲ್ಲ ವಕೀಲರು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ
