ಬಳ್ಳಾರಿ, ಜೂನ್ 18:ಮಹಿಳೆಯರ ಹೆಸರು ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತಿದ್ದ ಮೋಸ್ಟ್ ವಾಂಟೆಡ್ ಕಾಮುಕನೊಬ್ಬ ಕೊನೆಗೂ ಬಂಧನಕ್ಕೊಳಗಾಗಿದ್ದಾನೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್ ಎಂಬಾತ, ಮಹಿಳೆಯರ ಖಾಸಗಿ ಫೋಟೋಗಳನ್ನು ದುರ್ಬಳಕೆ ಮಾಡಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಗೂಗಲ್ನ ತಾಂತ್ರಿಕ ನೆರವಿನಿಂದ ಬಂಧಿಸಿದ್ದಾರೆ.
ಬಂಧಿತನ ಮೊಬೈಲ್ ಫೋನ್ನಲ್ಲಿ ಸುಮಾರು 13,000ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಚಿತ್ರಗಳು ಹಾಗೂ ವೀಡಿಯೊಗಳು ಪತ್ತೆಯಾಗಿದ್ದು, ತನಿಖಾಧಿಕಾರಿಗಳು ನಿಶ್ಶಬ್ದರಾಗಿದ್ದಾರೆ. ಸಾಫ್ಟ್ವೇರ್ ಡಿಪ್ಲೊಮಾ ಪಡೆದಿದ್ದ ಈತ, ತಂತ್ರಜ್ಞಾನ ಬಳಸಿ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದಾನೆ.
ಆರೋಪಿ, ಮಹಿಳೆಯರನ್ನು ಫ್ರೆಂಡ್ ಆಗಿ ಸೇರಿಸಿಕೊಂಡು ನಂತರ ಅವಶ್ಯವಾಗಿ ಅಶ್ಲೀಲ ವಿಡಿಯೋ ಕಾಲ್ಗೆ ಒತ್ತಾಯಿಸುತ್ತಿದ್ದ. ಒಪ್ಪದ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ. ಈ ಸಂಬಂಧ ವಿದ್ಯಾರ್ಥಿನಿಯೋರ್ವಳ ದೂರುದಿಂದ ತನಿಖೆ ಆರಂಭಿಸಿ, ಸಂಡೂರಿನಲ್ಲಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ತನಿಖೆಯಲ್ಲಿ ಆತನಿಂದ 10 ನಕಲಿ ಖಾತೆಗಳು ಹಾಗೂ 90ಕ್ಕೂ ಹೆಚ್ಚು ಇಮೇಲ್ ಐಡಿಗಳು ಸೃಷ್ಟಿಸಲ್ಪಟ್ಟಿರುವುದು ಹೊರಬಿದ್ದಿದೆ. ಈ ಮೂಲಕ ಮಹಿಳೆಯರ ಗೌರವ ಹಾಗೂ ಗೌಪ್ಯತೆ ಹಾಳು ಮಾಡುತ್ತಿರುವಂತಹ ಕ್ರೌರ್ಯಮಯ ಕೃತ್ಯಕ್ಕೆ ಕಡಿವಾಣ ಹಾಕಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೊಂದರೆ ರಹಿತ ಪ್ರಯಾಣಕ್ಕೆ FASTag ಆಧಾರಿತ ವಾರ್ಷಿಕ ಪಾಸ್

[…] ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: 13 ಸಾವಿ… […]