ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: 13 ಸಾವಿರಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ

ಬಳ್ಳಾರಿಯ ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ 25 ವರ್ಷದ ಯುವಕನೊಬ್ಬ ಮಹಿಳೆಯರ ಮೇಲೆ ನಕಲಿ ಖಾತೆಗಳ ಮೂಲಕ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದ. ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ಈತನ ಮೊಬೈಲ್‌ನಲ್ಲಿ 13,000ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಚಿತ್ರಗಳು ಹಾಗೂ ವೀಡಿಯೊಗಳು ಪತ್ತೆಯಾಗಿವೆ. ಆರೋಪಿಯು 90ಕ್ಕೂ ಹೆಚ್ಚು ಇಮೇಲ್ ಐಡಿಗಳು ಹಾಗೂ 10 ನಕಲಿ ಖಾತೆಗಳನ್ನು ಬಳಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.