ಶಿವಮೊಗ್ಗ- ಸೆಕ್ಸ್ ಸ್ಕ್ಯಾಂಡಲ್ ಮತ್ತು ಯುವಕನ ಆತ್ಮಹತ್ಯೆ ಪ್ರಕರಣ: ತೀವ್ರ ಸದ್ದು ಮಾಡುತ್ತಿದೆ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕ ತೌಡತ್ತಿ ಗ್ರಾಮದ ಸಂತೋಷ ಗಣಪತಿ ನಾಯ್ಕ (26) ಎಂಬುವವರು ಸಿದ್ದಾಪುರದ ಕಾಳೇನಳ್ಳಿ ಸಮೀಪದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ ಮೃತ್ಯುವಿಗೆ ಮೊದಲು ಮಾಡಿದ ವಿಡಿಯೋದಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವ ಪ್ರಕರಣವೊಂದನ್ನು ಬಯಲಿಗೆ ತಂದಿದ್ದಾರೆ.