ಕೊರಟಗೆರೆ :- ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಖ ಮಠದಲ್ಲಿ ಶಿವರಾತ್ರಿ ಜಾಗರಣೆ ಮಹೋತ್ಸವ- 2026 ಅಹೋರಾತ್ರಿ ಜಾಗರಣ ಮಹೋತ್ಸವನ್ನ ಫೆಬ್ರುವರಿ 15ರ ಭಾನುವಾರ ಸಂಜೆ 7 ಗಂಟೆಗೆ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಶ್ರೀ ಹನುಮಂತನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಉದ್ಯಮಿ ಎಚ್ ಪಿ ನೀಲೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾಶಿವರಾತ್ರಿಯ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸಿದ್ಧರಬೆಟ್ಟ ರಂಭಾಪುರಿ ಶಾಖ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ,
ಚಿತ್ರದುರ್ಗ ಬೋವಿ ಗುರುಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಗಂಗೆ ಹೊನ್ನಮ್ಮ ಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀರಂಗಪಟ್ಟಣ ಶ್ರೀ ಕ್ಷೇತ್ರ ಬಿಬಿ ಮಠದ ಶ್ರೀ ತ್ರಿನೇತ್ರ ಮಹಂತರ ಶಿವಯೋಗಿ ಮಹಾಸ್ವಾಮೀಜಿ,ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರ್ಯದೇಶ್ವರ ಮಠದ ಶ್ರೀ ಕಾರದ ವೀರಬಸವ ಲಿಂಗೇಶ್ವರ ಸ್ವಾಮೀಜಿ, ಚಿಕ್ಕ ತೊಟ್ಲುಕೆರೆ ಅಟವಿ ಮಠದ ಶ್ರೀ ಅಠವಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ನರಸೀಪುರ ತಾಲೂಕು ಉಂಡಿ ವಿರಕ್ತಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ವನಕಲ್ಲು ಬಸವಾನಂದ ಮಹಾಸ್ವಾಮೀಜಿ, ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ದಿವ್ಯಸಾದಿತ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ , ಮಾಜಿ ಸಹಕರಿ ಸಚಿವ ಹಾಗೂ ಮಧುಗಿರಿ ಶಾಸಕರಾದ ಕೆಎನ್ ರಾಜಣ್ಣ, ಆಡಳಿತ ಸುಧಾರಟ ಆಯೋಗದ ಅಧ್ಯಕ್ಷರು ಹಾಗೂ ಅಲಿಯಾಳ ಶಾಸಕರಾದ ಆರ್ ವಿ ದೇಶಪಾಂಡೆ, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿಬಿ ಜಯಚಂದ್ರ, ತುಮಕೂರು ಮಾಜಿ ಸಂಸದ ಜಿಎಸ್ ಬಸವರಾಜು, ಶಾಸಕರುಗಳಾದ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ತುಮಕೂರಿನ ಜ್ಯೋತಿ ಗಣೇಶ್ ಪಾವಗಡದ ವೆಂಕಟೇಶ್ ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ ತಿಪಟೂರು ಶಾಸಕ ಷಡಕ್ಷರಿ ಮಾಜಿ ಸಂಸದ ಬುದ್ಧ ಹನುಮೇಗೌಡ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ವಿಧಾನ ಪರಿಷತ್ ಸದಸ್ಯ ಡಿಟಿ ಶ್ರೀನಿವಾಸ್ ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಮಹಾನಗರ ಪಾಲಿಕೆಯ ಶುಭ, ಮಹಾನಗರ ಪಾಲಿಕೆಯ ನಿಕಟಪೂರ್ವ ಆಯುಕ್ತ ಅಶ್ವಿಜ, ಚಿಕ್ಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು, ತುಮಕೂರು ಉಪವಿಭಾಗಾಧಿಕಾರಿ ಮಹಿಳಾ ಜುಮ್ ಜುಮ್ ,ತಹಸೀಲ್ದಾರ್ ಮಂಜುನಾಥ್, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಮದುಗಿರಿ ಉಪ ವಿಭಾಗಾಧಿಕಾರಿ ಶಿವಪ್ಪ ನಾಯಕ್ , ತಾಸಿಲ್ದಾರ್ ಮಂಜುನಾಥ್ , ಡಿವೈಎಸ್ಪಿ ಮಂಜುನಾಥ್ , ಸಿಪಿಐ ಅನಿಲ್ , ಪಿಎಸ್ಐ ತೀರ್ಥೇಶ್, ಅಭಿಷೇಕ್ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಉಮೇಶ್ ಬೆಸ್ಕಾಂ ಎಇಇ ಪ್ರಸನ್ನ ಕುಮಾರ್ ಸೇರಿದಂತೆ ಹಲವಾರು ಭಾಗವಹಿಸಲಿದ್ದಾರೆ.
ವೇದಿಕೆಯಲ್ಲಿ ಜನಮನ ಸುರೇಗೊಳ್ಳುವ ರೀತಿಯಲ್ಲಿ ಇಡೀ ರಾತ್ರಿಯ ಜಾಗರಣೆಯ ಪ್ರಯುಕ್ತ ಮಹಾಶಿವರಾತ್ರಿಯ ವಿಶೇಷ ಎಂಬುವಂತೆ 12 ಗಂಟೆಗಳ ಅಹೋ ರಾತ್ರಿ ಜಾಗರಣೆ, ಶಾಸ್ತ್ರೀಯ ಭಕ್ತಿ ಜನಪದ ಮತ್ತು ಆಧುನಿಕ ಕಲಾ ಪ್ರದರ್ಶನಗಳು, ಶಿವ ತತ್ವದ ವಿಷಯ ವಿನ್ಯಾಸ, ಲೇಸರ್, ಎಲ್ಇಡಿ ಮತ್ತು ದೃಶ್ಯ ವೈಭವ, ಖ್ಯಾತ ನಿರೂಪಕರು ಹಾಗೂ ವಿಶೇಷ ಅತಿಥಿಗಳು, ನೇರ/ ವಿಳಂಬ ಪ್ರಸಾರಕ್ಕೆ ಅನುಕೂಲಕರ ವಿನ್ಯಾಸ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜಾಗರಣೆಗೆ ಮೆರುಗು ನೀಡಲಾಗುವುದು ಎಂದು ಪರ್ವ ಗ್ರೂಪ್ ದುಬೈ ಸಂಸ್ಥಾಪಕ ನೀಲೇಶ್ ಎಚ್ ಪಿ, ಕರ್ವ ಗ್ರೂಪ್ ಸಹ ಸಂಸ್ಥಾಪಕರಾದ ಶಶಿಧರ್ ನಾಗರಾಜಪ್ಪ, ಬಿಜೆಪಿ ಕೊರಟಗೆರೆ ಮಂಡಲ ಅಧ್ಯಕ್ಷ ರುದ್ರಶ್ ಟಿಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
