ಶ್ರವಣಬೆಳಗೊಳ, ನವೆಂಬರ್ 9, 2025: ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ 108ನೇ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಲ್ಕನೇ ಬೆಟ್ಟದ ಪದನಾಮ ಅನಾವರಣ ಕಾರ್ಯಕ್ರಮ ಈ ತಿಂಗಳ 9 ರಂದು ಜರುಗಲಿದೆ ಎಂದು ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಶಾಂತಿಸಾಗರ ಮಹಾರಾಜರ ಜೀವನ ಚರಿತ್ರೆ:
1872 ರಲ್ಲಿ ಉತ್ತರ ಕರ್ನಾಟಕದ ಭೋಜ ಗ್ರಾಮದಲ್ಲಿ ಜನಿಸಿ ಧರ್ಮ, ಧ್ಯಾನ, ರತ್ನತ್ರಯ ಪಾಲನೆ ಮತ್ತು ದೇವಶಾಸ್ತ್ರ ಗುರುಗಳಿಗೆ ಅಪಾರ ಭಕ್ತಿ ಹೊಂದಿದ್ದರು.
1912 ರಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸಿ ದಿಗಂಬರ ಮುನಿ ಪರಂಪರೆ ಅರಿತರು.
1920 ರಲ್ಲಿ ಸ್ವಯಂ ಮುನಿದೀಕ್ಷೆ ಪಡೆದು, ದೇಶದ ಬಾಹ್ಯ ಪ್ರದೇಶಗಳಲ್ಲಿ ಮುನಿಗಳ ವಿಹಾರಕ್ಕಾಗಿ ಬ್ರಿಟೀಷ್ ಸರ್ಕಾರದ ಅನುಮತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶ್ರಮಣ ಮುನಿ ಪರಂಪರೆಯಲ್ಲಿ ಮಹಾತಪತ್ವಿ, 9338ಕ್ಕೂ ಅಧಿಕ ಉಪವಾಸ ಆಚರಣೆ ನಡೆಸಿ, ಜೈನ ಧರ್ಮ ಮತ್ತು ಶ್ರೀಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು.
1925 ರಲ್ಲಿ ಶ್ರವಣಬೆಳಗೊಳಕ್ಕೆ ಮತ್ತೊಮ್ಮೆ ಆಗಮಿಸಿ ಮಹಾಮಷ್ಠಕಾಭಿಷೇಕ ಸಾನಿಧ್ಯ ಪಧಾನ ಮಾಡಿದ್ದಾರೆ.
ಕಾರ್ಯಕ್ರಮ ವಿವರಗಳು (9 ನವೆಂಬರ್):
ಬೆಳಗ್ಗೆ 12:00 – ಗೊಮ್ಮಟನಗರ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಘಾಟನೆ.
ಮಧ್ಯಾಹ್ನ 1:00 – 4ನೇ ಬೆಟ್ಟದ ಮೇಲೆ ಶಾಂತಿಸಾಗರ ಮಹಾರಾಜರ ಪ್ರತಿಮೆ, ಚರಣ ಪಾದುಕೆ ಸ್ಥಾಪನೆ, ಬೆಟ್ಟಕ್ಕೆ ಪದನಾಮ ಅನಾವರಣ ಮತ್ತು ಶೀಲಾಶಾಸನ ಲೋಕಾರ್ಪಣೆ.
ಮಧ್ಯಾಹ್ನ 3:00 – ಬೃಹತ್ ಮೆರವಣಿಗೆ: ಪ್ರತಿಮೆಯೊಂದಿಗೆ ಮಂಗಳವಾದ್ಯ, ಧರ್ಮಧ್ವಜ, ಮಂಗಳಕಳಶಗಳೊಂದಿಗೆ.
ಸಂಜೆ 6:00 – ಆರತಿ ಕಾರ್ಯಕ್ರಮ.
ಮುಖ್ಯ ಅತಿಥಿಗಳು:
ರಾಷ್ಟ್ರೀಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ.
ರಾಜ್ಯ/ಜಿಲ್ಲಾ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ.ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ (ಅಧ್ಯಕ್ಷತೆ), ಶಾಸಕರು ಅಭಯ್ ಪಾಟೀಲ, ಎಂಎಲ್ಸಿ ಡಾ. ಸೂರಜ್ ರೇವಣ್ಣ, ರಾಜ್ಯಸಭಾ ಸದಸ್ಯ ನವೀನ್ ಜೈನ್, ಮಹಾರಾಷ್ಟ್ರದ ಶಾಸಕರು.
ಪ್ರಮುಖ ಘೋಷಣೆಗಳು:
ಶಾಂತಿಸಾಗರ ಮಹಾರಾಜರ 100ನೇ ಪುಣ್ಯಸ್ಮರಣಾ ಶತಮೋತ್ಸವದ ಸವಿ ನೆನಪಿನಲ್ಲಿ 7 ಇಂಚು ಉದ್ದದ 100 ಪ್ರತಿಮೆ ನಿರ್ಮಿಸಿ ಕರ್ನಾಟಕದ ಎಲ್ಲಾ ಜಿನ ಮಂದಿರಗಳಲ್ಲಿ ಸ್ಥಾಪನೆ.
ಮಹಾರಾಜರ ಸಂಪೂರ್ಣ ಜೀವನ ಚರಿತ್ರೆ 1000 ಶೀಲಾಶಾಸನಗಳಲ್ಲಿ ಕೆತ್ತಿಸಲಾಗಿದ್ದು, ವಿಂಧ್ಯಗಿರಿ, ಚಂದ್ರಗಿರಿ ಮತ್ತು ಚಾರುಗಿರಿ ಬೆಟ್ಟದೊಂದಿಗೆ 4ನೇ ಬೆಟ್ಟದ ಉದ್ಘಾಟನೆ.
ಶ್ರವಣಬೆಳಗೊಳ ಶ್ರೇಷ್ಟ ಜೈನ ಪಾರಂಪರ್ಯದ ತತ್ವಜ್ಞಾನವನ್ನು ಹಿನ್ನಲೆ ಮಾಡಿಕೊಂಡು ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಮಹತ್ವದ ದಿನವಾಗಿದೆ.
– ಮಂಜುನಾಥ್ ಐ.ಕೆ.
