ಕೊರಟಗೆರೆ :- ಸಿದ್ದರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸುವತ್ತಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೆರೆಗಳನ್ನು ಕಟ್ಟಿಸಿ ಜಾತಿ-ಬೇದವಿಲ್ಲದೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಸಮಾಜಿಕ ಸಮಾನತೆ ತರಲು ಪ್ರಯತ್ನಿಸಿದ ಹರಿಕಾರರಾಗಿ ಅಧುನಿಕ ಸಮಾಜಸೇವಕರಿಗೆ ಆದರ್ಶವಾಗಿದ್ದಾರೆ ಎಂದು ಗ್ರೇಡ್2 ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು.
ಅವರು ಪಟ್ಟಣದ ತಾಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಭೋಮಿ ಕ್ಷೇಮಾಭಿವೃದ್ದಿ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 12ನೇ ಶತಮಾನದಲ್ಲಿಯೇ ಸಿದ್ದರಾಮೇಶ್ವರರು ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದವರು ಗ್ರಾಮಗಳ ಅಭಿವೃದ್ದಿಗೆ ಮೂಲಭೂತ ಸೌಕರ್ಯಗಳನ್ನು ವದಗಿಸುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತವರು ಸಿದ್ದರಾಮೇಶ್ವರರು ಜ್ಞಾನ ಪ್ರಚಾರ, ಕಾಯಕ, ದಾಸೋಹ ದಂತಹ ಮಹತ್ತರ ಕಾರ್ಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ತಾಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ದೊಡ್ಡರಾಮಯ್ಯ ಮಾತನಾಡಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರು ಭೋವಿ ಸಮಾಜದ ಕುಲ ಗುರುಗಳಾಗಿದ್ದು ವಿಶೇಷವಾಗಿ 12ನೇ ಶತಮಾನದಲ್ಲಿ ಅಲ್ಲಮಪ್ರಭು ಬಸವಣ್ಣ, ಅಕ್ಕಮಹಾದೇವಿ ಇವರ ಸಮಕಾಲೀನವಾರಾಗಿದ್ದು ಇವರು ಅನುಭವ ಮಂಟಪದಲ್ಲಿ ಬಾಗವಹಿಸಿ ವಚನ ರಚಿಸಿದರು, ಇವರು 68,000 ಚವನ ರಚಿಸಿದ್ದರೆನ್ನಲಾಗಿದೆ, ಸಿದ್ದರಾಮೇಶ್ವರರು ತಮ್ಮ ಸಮಾಜಸೇವೆ ಮತ್ತು ಆಧ್ಯಾತ್ಮಿಕ ಸಾಧನೆಗಳಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಸಿದ್ದರಾಗಿದ್ದಾರೆ ಎಂದರು.
ತಾಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಪಧಾದಿಕಾರಿ ರಾಜು ಮಾತನಾಡಿ 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಬೇಧವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ವಚನಗಳ ಮೂಲಕ ಪ್ರಚಾರ ಮಾಡಿದರು ಹಾಗೂ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ವೆಂಕಟೇಶ್ಮೂರ್ತಿ, ಆರ್.ಐ ಬಸವರಾಜು, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಯಮುನಾ, ತಾಲೂಕು ಶ್ರೀ ಸಿದ್ದರಾಮೇಶ್ವರ ಬೋವಿ ಕ್ಷೇಮಾಭಿವೃಧ್ದಿ ಸಂಘದ ಆಧ್ಯಕ್ಷ ಅಶ್ವತ್ಥಪ್ಪ, ಕಾರ್ಯಾಧ್ಯಕ್ಷ ಹಾಗೂ ತಾ.ಪಂ.ಮಾಜಿ ಸದಸ್ಯ ವೆಂಕಟಪ್ಪ, ಗ್ರಾ.ಪಂ.ಸದಸ್ಯ ನಾಗರಾಜು, ಸಂಘದ ಪಧಾದಿಕಾರಿಗಳಾದ ಸುರೇಶ್, ನಟರಾಜು, ಸಿದ್ದರಾಜು, ಮುಖ್ಯಶಿಕ್ಷಕ ಬಿ.ಆರ್.ಮಂಜುನಾಥ್, ಶಿಕ್ಷಕ ದೇವರಾಜು. ಹನುಮಂತರಾಯ, ರಾಮಕೃಷ್ಣ, ರಾಮಯ್ಯ, ಯಲ್ಲಪ್ಪ. ನಾಗರಾಜಪ್ಪ ನಾಗೇಶ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಆಧಿಕಾರಿಗಳು ಭಾಗವಹಿಸಿದ್ದರು.
-ಶ್ರೀನಿವಾಸ್ ಕೊರಟಗೆರೆ.
