ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಗ್ರಾಮದ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಅಧಿಕಾರಿಗಳ ವಸತಿ ಗೃಹದ ಕಾಮಗಾರಿಯು ತ್ವರಿತವಾಗಿ ಆರಂಭಿಸಲು ಅದಿಕಾರಿಗಳ ತಂಡ ಮೂಗೂರಿಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಮೂಗೂರು ಹೋಬಳಿ ಕೇಂದ್ರದಲ್ಲಿ ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ವಿಐಪಿ ವಸತಿ ಗೃಹದ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲಾಗಿದ್ದು ಸುಮಾರು 7.5 ಕೋಟಿ ರೂ ಅಂದಾಜಿಸಲಾಗಿದೆ. ಸದ್ಯದಲ್ಲೇ ಕಟ್ಟಡದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಪಿಡಬ್ಲ್ಯೂಡಿ ಎಇಇ ಸತೀಶ್ ಚಂದ್ರ ತಿಳಿಸಿದರು.

ಐತಿಹಾಸಿಕ ಹಿನ್ನಲೆಯುಳ್ಳ ಮೂಗೂರು ಕ್ಷೇತ್ರದಲ್ಲಿ ಪ್ರತಿವರ್ಷ ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಹಾಗೂ ವಿಶೇಷ ದಿನಗಳಲ್ಲಿ ಅಮ್ಮನವರ ಪೂಜಾ ಕೈಂಕರ್ಯಗಳು ನಡೆಯುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸುತ್ತಾರೆ. ಇದರಲ್ಲಿ ರಾಜಕಾರಣಿಗಳು,ಐಎಎಸ್,ಐಪಿಎಸ್,ಕೆಎಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ವರ್ಗ ಬಹಳ ಸಂಖ್ಯೆಯಲ್ಲಿ ಆಗಮಿಸುವುದರಿಂದ ವಸತಿ ಗೃಹ ನಿರ್ಮಾಣ ಬಹಳಷ್ಟು ಉಪಯೋಗವಾಗಲಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು ಮುಖಂಡರಾದ ಎಂ ಡಿ ಬಸವರಾಜು ಅರ್ಚಕ ಸುಂದರಪ್ಪ, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.
