
ತುಮಕೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ 1 ತಿಂಗಳ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನ ನೀಡಲಾಗುವುದು. ಅರ್ಜಿದಾರರು ಪ.ಜಾತಿ ಅಥವಾ ಪ.ಪಂಗಡಕ್ಕೆ ಸೇರಿದವರಾಗಿದ್ದು, ೨೦ ರಿಂದ ೪೫ ವರ್ಷದೊಳಗಿನವರಾಗಿರಬೇಕು ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಲಘು ವಾಹನ ಚಾಲನಾ ಪರವಾನಗಿಯನ್ನು ಪಡೆದಿರಬೇಕು. ನಗರ ಪ್ರದೇಶದವರ ವಾರ್ಷಿಕ ಆದಾಯ ೨ ಲಕ್ಷ ರೂ. ಹಾಗೂ ಗ್ರಾಮಾಂತರ ಪ್ರದೇಶದವರ ವಾರ್ಷಿಕ ಆದಾಯ ೧.೫೦ಲಕ್ಷ ರೂ.ಗಳನ್ನು ಮೀರಬಾರದು. ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.
ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ/ಆದಾಯ ಪ್ರಮಾಣಪತ್ರ, ಖಾಯಂ ಲಘು ವಾಹನ ಚಾಲನಾ ಪರವಾನಗಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ್ ಕಾರ್ಡ್, ಯಾವುದೇ ಸರ್ಕಾರಿ ಇಲಾಖೆ/ನಿಗಮ/ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರದ ಬಗ್ಗೆ ಸ್ವಯಂ ಪ್ರಮಾಣೀಕರಿಸಿ ೫೦ರೂ. ಬೆಲೆಯ ಛಾಪಾಕಾಗದದಲ್ಲಿ ನಮೂನೆ-೩ರಲ್ಲಿ ಪ್ರಮಾಣಪತ್ರ ಲಗತ್ತಿಸಬೇಕು. ಅಗತ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಯಲ್ಲಿ ಫೆಬ್ರವರಿ ೨೦ರೊಳಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ರೆಡ್ಕ್ರಾಸ್ ಭವನ, ೧ನೇ ಮಹಡಿ, ಕೊಠಡಿ ಸಂಖ್ಯೆ: ಎಫ್ ೨೩೨, ಅಶೋಕ ರಸ್ತೆ, ತುಮಕೂರು-೫೭೨೧೦೧ ಇವರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816-2006349 ನ್ನು ಸಂಪರ್ಕಿಸಬೇಕೆAದು ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ವರಿ ತಿಳಿಸಿದ್ದಾರೆ.