ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ.
ಪ್ರತಿ ಮನೆಗೂ ಎಸ್ಕಾಂ ಇಲಾಖೆಯಿಂದ ಯುಎಚ್ಐಡಿ (UHID) ನಂಬರ್ ಜನರೇಟ್ ಮಾಡಿ ಸ್ಟಿಕ್ಕರ್ ಅಂಟಿಸುವ ಕೆಲಸ ಆರಂಭಗೊಂಡಿದ್ದು, ಸಮೀಕ್ಷೆಯ ಸಮಯದಲ್ಲಿ ಸರ್ಕಾರ ನಿಯೋಜಿಸಿದ ಗಣತಿದಾರರು ಮೊಬೈಲ್ ಆಪ್ ಮುಖಾಂತರ ಸಮೀಕ್ಷೆ ಕೈಗೊಳ್ಳಲಿದ್ದಾರೆ.
ಸಮೀಕ್ಷೆಯ ವೇಳೆ ಸುಮಾರು 60 ಪ್ರಶ್ನೆಗಳು ಕೇಳಲಾಗಲಿದ್ದು, ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ, ವಿಕಲಚೇತನರಿಗೆ UID ಕಾರ್ಡ್ ಅಥವಾ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಆಧಾರ್ ಕಾರ್ಡ್ಗಳಿಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ, ಲಿಂಕ್ ಇಲ್ಲದಿದ್ದಲ್ಲಿ ನೋಂದಣಿ ಕೇಂದ್ರದಲ್ಲಿ ಹೊಸದಾಗಿ ಲಿಂಕ್ ಮಾಡಿಸಿಕೊಳ್ಳಬೇಕು.
ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ವಿದ್ಯಾರ್ಹತೆ, ಕೌಶಲ್ಯ ತರಬೇತಿ, ಆದಾಯ, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಮುಂತಾದ ಮಾಹಿತಿಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 8050770004 ಗೆ ಕರೆಮಾಡಬಹುದು ಅಥವಾ kscbc.karnataka.gov.in ವೆಬ್ಸೈಟ್ನ್ನು ಸಂಪರ್ಕಿಸಬಹುದು.
