ಬಗವಾನ್ ಬುದ್ಧ ಅನಾತ್ಮಿಕ, ಅಗಣಕ ಮತ್ತು ಎಲ್ಲರ ಆತ್ಮಗಳಲ್ಲಿ ಒಂದಾದಂತ ಪರಮ ಪುರುಷ. 3,500 ವರ್ಷಗಳ ಹಿಂದೆಯೇ ಸುಗಮ ಬದುಕಿಗೆ ಸುಲಭದ ಸೂತ್ರವನ್ನು ಕಂಡುಕೊಂಡು ಪ್ರಪಂಚಾದ್ಯಂತ ಸಾರಿದ್ದ ಮಹಾನ್ ಸಂತ ಬುದ್ಧ. Where there is “chintha” one find “achintha”. “ಶೋಕ”ಕ್ಕೆ “ಅಶೋಕ”ವೇ ಉತ್ತರ. ಅಂದಿನ ಚಕ್ರವರ್ತಿಯಾದ ಅಶೋಕ ಈ ಸೂತ್ರವನ್ನು ಅನುಸರಿಸಿದ್ದರು ಎಂಬ ಉಲ್ಲೇಖಗಳು ಇವೆ. ಕರುಣಾಮಯಿ ಬುದ್ಧನು ತಂತ್ರಜ್ಞಾನದಲ್ಲಿ ಸಾರ್ವಭೌಮತ್ವವನ್ನು ಸಾಧಿಸಿದ್ದ ಅಪ್ರತಿಮ. ಜೀವ ಮತ್ತು ಭೂಮಿ ನಿಂತಿರುವುದು ವಿರುದ್ಧ ಸಿದ್ಧಾಂತದ ಮೇಲೆ ಎಂದು ಬುದ್ದರು ಹೇಳಿದ್ದರು . ಉದಾಹರಣೆಗೆ ಗಂಡು ಮತ್ತು ಹೆಣ್ಣು, ಬಿಳಿ ಮತ್ತು ಕಪ್ಪು, ಶಾಂತಿ ಮತ್ತು ಅಶಾಂತಿ, matter ಮತ್ತು antimatter ಇತ್ಯಾದಿ. ಬುದ್ಧ ಎಂದೂ ಕಣ್ಣು ಮುಚ್ಚಿ ಧ್ಯಾನ ಮಾಡುತ್ತುರಿಲಿಲ್ಲ. ಕಣ್ಣು ತೆರೆದೇ ಧ್ಯಾನಿಸುತ್ತಿದ್ದರು. ಇಂತಹ ಧ್ಯಾನಾವಸ್ತೆಯನ್ನು ನಾನು “ಕಣ್ಣು ತೆರೆದು ಧ್ಯಾನಿಸು (open meditation)” ಎಂದು ಹೆಸರಿಟ್ಟಿದ್ದೇನೆ. ಬುದ್ಧರು ತಮ್ಮ ಧ್ಯಾನದಲ್ಲಿ ಬ್ರಹ್ಮಾಂಡವು ಗೋಳಾಕಾರವಾಗಿ ಇದ್ದು, ಎಲ್ಲಾ ಜೀವ ಸಂಕುಲ, ಭೂಮಿ ಮತ್ತು ವಿಶ್ವ ಒಂದು ಬೃಹತ್ತಾದ ಅನಂತ ಗುಳ್ಳೆಯ ಒಳಗೆ ಇರುತ್ತುವೆಂದು ಹೇಳಿದ್ದರು. ಇಂತಾದ್ದೆ ಸಾದೃಶ್ಯವನ್ನು ಪರಮಾಣುವಿನಲ್ಲೂ ಕಂಡರು. ಬ್ರಹ್ಮಾಂಡಕ್ಕೆ ಹಿರಣ್ಯ ಗರ್ಭ (ನಾಭಿ) ಕೇಂದ್ರವಾದರೆ ಪರಮಾಣುಗೆ ಕೇಂದ್ರ ಬಿಂದು nucleus. ಹೇಗೆ ನಕ್ಷತ್ರಗಳು ಮತ್ತು ಗ್ರಹಗಳು ಒಂದಕ್ಕೊಂದು electro magnetic force ಗಳಿಂದ ಹಿಡಿತವನ್ನು ಸಾಧಿರಿಸುತ್ತದೆಯೋ ಹಾಗೆಯೇ ಪರಮಾಣುವಿನಲ್ಲಿ elctron, proton ಇಂತಾದ್ದೆ ಕೆಲಸ ಮಾಡುತ್ತಿರುತ್ತದೆ.
ಇದನ್ನು ಓದಿ: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ)
ಶೂನ್ಯಾಕಾರದಲ್ಲಿ ಇರುವ ಬ್ರಹ್ಮಾಂಡ ಮತ್ತು ಪರಮಾಣುವನ್ನು ಗಮನಿಸಿದ್ದ ಗಣಿತ ವಿದ್ವಾಂಸ ಆರ್ಯಭಟ್ಟ ಸೊನ್ನೆ (zero) ಆವಿಷ್ಕಾರ ಮಾಡಿದ್ದರು. ಈ ವಿದ್ವಾಂಸರ ಕೊಡುಗೆ ಅಪಾರ. ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ, ನಾವು 1 ರಿಂದ 9 ಸಂಖ್ಯೆಗಳನ್ನು ಬರೆಯುವಾಗ ಶುರು ಮತ್ತು ಕೊನೆ ಇವೆ ಅದರೆ ಸೊನ್ನೆ ಬರೆಯುವಾಗ ಶುರುವೂ ಇಲ್ಲ, ಕೊನೆಯೂ ಇಲ್ಲ (ತಾರ್ಕಿಕ). ಅದುದರಿಂದಲೇ ಶೂನ್ಯ, ಅನಂತ ಮತ್ತು ಶ್ರೇಷ್ಠ. ಆದಿ ಶಂಕರಾಚಾರ್ಯರು ತಮ್ಮ ಸೂಕ್ತಿ ಒಂದರಲ್ಲಿ “ನಾವು ಅಸ್ತಿತ್ವದಲ್ಲಿದ್ದರೂ, ಶೂನ್ಯದ ಒಳಗೆ ಇರುವುದರಿಂದ ನಮ್ಮ ಬದುಕು ಭ್ರಮೆ ಅಥವ ಮಾಯೆ (illusion)” ಎಂದಿದ್ದರು. ಇಡೀ ಬ್ರಹ್ಮಾಂಡವು ಪರಮಾಣುಗಳಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ ಒಂದು ಗುಂಡು ಸೂಜಿಯ ಗುಂಡಿ ಸುಮಾರು ಕೋಟ್ಯಂತರ ಪರಮಾಣುಗಳಿಂದ ಕೂಡಿರುತ್ತದೆ. ಅನಿಲ, ದ್ರವ ಮತ್ತು ಘನ ವಸ್ತು ಎಲ್ಲದರಲ್ಲೂ ಪರಮಾಣುಗಳಿರುತ್ತೆ. ದೃಢತೆ, ತೀಕ್ಷ್ಣತೆ, ವಿಕಿರಣತೆ ಹಾಗು ಶಕ್ತಿಯ ಪ್ರಕಾರ ಪರಮಾಣುಗಳ ವಿಂಗಡಣೆಯನ್ನು ಮಾಡಲಾಗಿದೆ. ಉದಾಹರಣೆಗೆ, plutonium ಮತ್ತು uranium ಮೂಲ ಧಾತುಗಳಿಗೆ ವಿಕರಣತೆ ಮತ್ತು ಶಕ್ತಿ ಅಧಿಕವಾಗಿ ಇದ್ದು ದೃಢತೆ ಅತೀ ಕಡಿಮೆ ಇರುವುದರಿಂದ ಅಣು ಬಾಂಬ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಹೀಗೆಯೇ ಈ ಅಣುವನ್ನು ವಿಧ್ಯುತ್ ಉತ್ಪಾದನೆಗೆ ಬಳಸಬಹುದು. ಇಂತಹ ಅಣುಗಳನ್ನು ನಾವು destruction by explosion, construction by implosion ಈ ಎರಡಕ್ಕೂ ಉಪಯೋಗಿಸಕೊಳ್ಳಬಹುದು.
ಇದನ್ನು ಓದಿ: ಸಸ್ಪೆಂಡೆಡ್ ಕಣ (ಒಂದು ವಿಮರ್ಶೆ)
ಸಾಮಾಜಿಕ ಪರಮಾಣುಗೆ ಬರೋಣ. ಈ ತಲೆ ಬರಹ ನನ್ನದು. ಯಾವ ಸಾಮಾಜಿಕ ತಾಣಗಳನ್ನು ಹುಡುಕಲು ಹೋಗಬೇಡಿ. ಹೀಗೊಮ್ಮೆ ಆಲೋಚನೆ ಮಾಡೋಣ. ನಾನು ಮೇಲೆ ಹೇಳಿದ ಮಾನದಂಡಗಳು ಪರಮಾಣುಗಳಿಗೆ ಆದರೆ ಸಾಮಾಜಿಕ ಪರಮಾಣುಗೆ ಯಾವ ಮಾನದಂಡ? ಧರ್ಮ, ಜಾತಿ, ಬಡವ, ರಾಜಕೀಯ, ಹಣ, ಶಕ್ತಿ ಇತ್ಯಾದಿ ನನಗೆ ಅರ್ಥವಾಗದೇ ಇರುವಂತಾದ್ದು. ನಮ್ಮ ದೇಶದಲ್ಲೇ ಪೌರತ್ವ ಪಡೆದು ಒಬ್ಬ ಸಾಮಾನ್ಯ ನಾಗರಿಕನಾಗಿ ಕೆಲವು ಸ್ಥಳಗಳಿಗೆ ಹೋಗಲು ನನಗೆ ಆಸಾಧ್ಯ. ಹೊಗಬಹುದು ಅದರೇ ಭಯದಿಂದ ಹೋಗಬೇಕು. ದೇಶ, ನಗರ, ಪಟ್ಟಣ ಮತ್ತು ಹಳ್ಳಿ, ಎಲ್ಲಾ ಕಡೆ ವರ್ತುಲಾಕಾರವಾಗಿ ಧರ್ಮಾಂಧಿತ ನಾಗರಿಕರು ತಮ್ಮ ವಸಹತು (demographic changes) ಸ್ಥಾಪಿಸಿ ನಮ್ಮದೇ ಎಂಬ ಅಂಧತ್ವದಲ್ಲಿ ಮೆರೆಯುತ್ತಿದ್ದಾರೆ. ಒಂದು ಅಣು ವರ್ತುಲಾಕಾರವಾಗಿ ಇದ್ದು ಮತ್ತು ತನ್ನ ಸ್ವಾಯತ್ತತೆಯ ನೆಲೆಯ ಮೇಲೆ ನಿಂತಿರುತ್ತದೆ. ಇಂದು ನಮ್ಮ ದೇಶದಲ್ಲೇ ಇಂತಹ ಹಲವಾರು ಸಾಮಾಜಿಕ ಅಣುಗಳು ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಸ್ಪಾಪಿಸಲು ಹೋರಟಿವೆ. ಈ ನಡುವಳಿಕೆಗಳು ಭಯಾನಕ ಮತ್ತು ದುರದೃಷ್ಟಕರ. ಈ ಸ್ಥಿತಿಯಿಂದ ದೇಶದ ಅನ್ಯ ಧರ್ಮದ ನಾಗರಿಕರು ಒಂದು ಸಾಮಾಜಿಕ ಅಣುವಿನಿಂದ ಇನ್ನೊಂದು ಸಾಮಾಜಿಕ ಅಣುವಿನ ಕಡೆ ಗೂಳೆ ಹೋಗುತ್ತಿದ್ದಾರೆ. ಎಂತಾ ಕರ್ಮ ನಮ್ಮದು ಅಲ್ಲವೇ.
ಇದನ್ನು ಓದಿ: ಯಮ ಮಹಾರಾಜ (ವೈಯಕ್ತಿಕ ಸಿದ್ಧಾಂತ)
ಒಂದು ಅಣು ವಿವಿಧ ಅಣುಗಳ ಜೊತೆ ಬೆರೆಯುವುದಿಲ್ಲ. ಅದರೆ ಸಾಮಾಜಿಕ ಅಣುಗಳು ಬೆರೆಯುತ್ತವೆ. ಬೆರೆತಂತಾ ಸಮಯಗಳಲ್ಲಿ ಆತಂಕ, ಅನುಮಾನ, ಜೀವ ಭಯ, ದ್ವೇಷ, ಇತ್ಯಾದಿ ಕಾಣಬಹುದು. ಈ ಕಾರಣಗಳಿಂದ ನಾಗರಿಕರು ಈ ಸಾಮಾಜಿಕ ಅಣುಗಳ ಗಡಿ ದಾಟಲು ಬಯಸುವುದಿಲ್ಲ. ಗಡಿ ದಾಟಿದವನು ತನ್ನ ವಿವೇಕದ ಅಡಿ ಹೋಗಬೇಕು. ಇಲ್ಲವಾದರೆ ಮಾನಸಿಕ ಒತ್ತಡಗಳು ಬರಬಹುದು. ಇಂತಹ ವರ್ತುಲಾಕಾರ ಸಾಮಾಜಿಕ ಹುಟ್ಟು ಧರ್ಮಗಳ ಹುನ್ನಾರವೇ? ಈ ತರಹದ ನಡುವಳಿಕೆ ಆರಾಮಧಾಯಕ ವರ್ತನೆಯೇ? ನಮ್ಮ ಮೊಮ್ಮಕ್ಕಳು, ಮರಿ ಮಕ್ಕಳು ಇನ್ನೂ ಜಗಳವಾಡಬೇಕೆ? ಎಂದು ಇದಕ್ಕೆಲ್ಲಾ ಕೊನೆ? ಒಂದು ಅಣು ಬೇರೆ ಅಣುವಿನ ಜೊತೆ ಬೆರೆಯಬೇಕಾದರೆ ಭೌತಿಕ ಮತ್ತು ರಸಾಯನಿಕ ಕ್ರಿಯೆಗಳಾಗಬೇಕು. ವಿವಿಧ ಅಣುಗಳು ಬೆರೆತಾಗ ಹೂಸ ಘನ ವಸ್ತು ಅಥವ ಲೋಹವನ್ನು ಕಾಣಬಹುದು. ಉದಾಹರಣೆಗೆ ಪಂಚ ಲೋಹ. ಇದರಿಂದ ಸುಂದರವಾದ ಮೂರ್ತಿಯನ್ನು ಕೆತ್ತನೆ ಮಾಡಬಹುದು. ಹೀಗೆಯೇ ಸುಂದರವಾದ ದೇಶವನ್ನು ಕಟ್ಟಬೇಕಲ್ಲವೇ? ಇಲ್ಲಿ physics ಮತ್ತು chemistry ಬೇಕಿಲ್ಲ. ಬೇಕಾಗಿರುವುದು ಧರ್ಮವನ್ನು ತಮ್ಮ ತಮ್ಮ ಮನೆಗಳಲ್ಲಿ ಬೀಗ ಹಾಕಿ ಮಾನವರಾಗಿ ಹೊರ ಬರಬೇಕು. ನಾವು ಪ್ರಾಣಿಗಳಲ್ಲ. ನಾವು ಯಾವುದೋ stone age ಲ್ಲೂ ವಾಸ ಮಾಡುತ್ತಿಲ್ಲ. ಪ್ರತಿಯೊಬ್ಬನೂ ಮಾನವ ತತ್ವವನ್ನು ಅನುಸರಿಬೇಕು. ಅಧ್ಯಾತ್ಮ ಸ್ವೀಕರಿಸಬೇಕು. ಕೆಟ್ಟ ರಾಜಕೀಯ ಭಾಷಣಗಳನ್ನು ನಿಲ್ಲಿಸಬೇಕು. ಎಲ್ಲಾ ಧರ್ಮದವರದ್ದೂ ಒಂದೇ ಶ್ರೀಕಾರವಾಗಬೇಕು. ಅವುಗಳೇ ರಾಷ್ಟ್ರ ಪ್ರೇಮ, ಸಹ ಜೀವನ, ಸಹಭಾಗಿತ್ವ, ಸಹ ಬಾಳ್ವೆ ಇತ್ಯಾದಿ….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: ಸಾಮಾಜಿಕ ಪರಮಾಣು (ವಾಸ್ತವಿಕ ಚಿಂತನೆ) […]