ಚನ್ನರಾಯಪಟ್ಟಣ, ಜೂನ್ 21: ಪಟ್ಟಣದ ಖ್ಯಾತ ಸಮಾಜ ಸೇವಕ ಮತ್ತು ಬೆಕ್ಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿರುವ ಬಿ.ಎನ್. ಕೇಶವಮೂರ್ತಿ ಅವರ ಜನ್ಮದಿನವನ್ನು ನೂರಾರು ಅಭಿಮಾನಿಗಳು ಹಾಗೂ ಸ್ನೇಹಿತರು ಭರ್ಜರಿಯಾಗಿ ಆಚರಿಸಿದರು.
ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ, ಸಮಾಜದ ವಿವಿಧವರ್ಗದ ಪ್ರತಿನಿಧಿಗಳು ಭಾಗವಹಿಸಿ, “ಕೇಶವಮೂರ್ತಿಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆಗಾಗಿ ಮುಂದಾಗಲಿ, ದೇವರು ಅವರಿಗೆ ಆಯಸ್ಸು, ಆರೋಗ್ಯ ಕಾಪಾಡಲಿ” ಎಂಬ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದರು.

ಈ ಸಂಭ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಗನ್ನಿ ಅಪ್ಪಿ, ನಾರಾಯಣಗೌಡ ಬಣದ ಮಧು ಕರೆಡೆವು, ಪಿಡಿಒ ನಿಂಬೆಹಳ್ಳಿ ಬಾಬು, ಬೆಕ್ಕ ಕೇಶವಮೂರ್ತಿ, ವರುಣ್ ಕೇಶವಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜನಸೇವೆ ಮತ್ತು ಹಿತಚಿಂತನೆಯ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಕೇಶವಮೂರ್ತಿಯವರ ಸೇವಾ ಮನೋಭಾವನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.
- ಮಂಜುನಾಥ್ ಐ.ಕೆ
