ಕೆ.ಆರ್.ಪೇಟೆ,ಏ.02: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಹಿರಿಯ ಪತ್ರಕರ್ತರಾದ ಹೋಟೆಲ್ ಬಸವಣ್ಣ ಅವರ ಸುಪುತ್ರ ಪ್ರತ್ರಕರ್ತರು ಹಾಗೂ ಹೋಟೆಲ್ ಉದ್ಯಮಿಗಳಾದ ಎ.ಬಿ.ಮಹೇಶ್ಕುಮಾರ್ (50) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರು ಪತ್ರಿಕೆಗಳ ವಿತರಕರಾಗಿ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ವರದಿಗಾರರಾಗಿ ತಮ್ಮ ತಂದೆಯ ಕಾಲದಿಂದಲೂ ಸೇವೆ ಸಲ್ಲಿಸಿದ್ದರು. ಜೊತೆಗೆ ಹೋಟೆಲ್ ವೃತ್ತಿ ನಡೆಸುವ ಜೊತೆಗೆ ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದರು.
ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯಾಹ್ನ ನಿಧನ ಹೊಂದಿರುತ್ತಾರೆ. ಮೃತರ ಅಂತ್ಯಕ್ರಿಯೆಯು ಏ.03ರಂದು ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
– ಶ್ರೀನಿವಾಸ್ ಆರ್.
