ಬೆಂಗಳೂರು, 3,2026: ಫೆಬ್ರವರಿ 14 ಮತ್ತು 15, 2026ರಂದು ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ನಡೆಯಲಿದೆ.
ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡದ ಮಾಲೀಕರಾದ ಸೌರವ್ ಗಂಗೂಲಿ ಅವರಿಗೆ ಬೀದಿ ಬದಿಯ ಸರ್ಕಿಟ್ಗಳ (Street Circuits) ಸವಾಲು ಅತ್ಯಂತ ಪರಿಚಿತವಾದುದಾಗಿದೆ. “ಸ್ಟ್ರೀಟ್ ರೇಸಿಂಗ್ ಕೇವಲ ಕಾರನ್ನಷ್ಟೇ ಅಲ್ಲ, ಇಡೀ ತಂಡವನ್ನೇ ಪರೀಕ್ಷಿಸುತ್ತದೆ. ಕ್ರಿಕೆಟ್ನಲ್ಲಿ ಒತ್ತಡದ ಕ್ಷಣಗಳು ಆಟಗಾರನ ಸಾಮರ್ಥ್ಯವನ್ನು ಹೇಗೆ ಪ್ರದರ್ಶಿಸುತ್ತವೆಯೋ, ಇಲ್ಲೂ ಅಷ್ಟೇ. ತಪ್ಪು ಮಾಡಲು ಅವಕಾಶವಿಲ್ಲದಿದ್ದಾಗ ವ್ಯಕ್ತಿತ್ವವು ಮುನ್ನೆಲೆಗೆ ಬರುತ್ತದೆ,” ಎನ್ನುತ್ತಾರೆ ಗಂಗೂಲಿ.
ಭಾರತೀಯ ಕ್ರಿಕೆಟ್ನಲ್ಲಿ IPL ತಂದ ಕ್ರಾಂತಿಕಾರಿ ಬದಲಾವಣೆಗೆ IRF ಅನ್ನು ಹೋಲಿಸಿದ ಗಂಗೂಲಿ, “ನನ್ನ ಪಾಲಿಗೆ ಇದು ರೇಸಿಂಗ್ ಲೋಕದ IPL. ಇದು ಅಂತರಾಷ್ಟ್ರೀಯ ಪ್ರತಿಭೆಗಳು ಮತ್ತು ಭಾರತೀಯ ಚಾಲಕರನ್ನು ಒಂದೇ ವೇದಿಕೆಯಲ್ಲಿ ತರುತ್ತದೆ,” ಎಂದರು.
ಗೋವಾ ರೇಸ್ ಕುರಿತು ಮಾತನಾಡುತ್ತಾ, “ಇದು ಹೊಸ ಸರ್ಕ್ಯೂಟ್ ಆದ ಕಾರಣ ಹಳೆಯ ಅನುಭವಗಳ ಆಧಾರವಿಲ್ಲ. ಹೀಗಾಗಿ ಚಾಲಕ, ಕಾರು ಮತ್ತು ತಂಡದ ನಡುವಿನ ಹೊಂದಾಣಿಕೆಯೇ ಇಲ್ಲಿ ಗೆಲುವಿನ ಸೂತ್ರ,” ಎಂದು ಅಭಿಪ್ರಾಯಪಟ್ಟರು.
ತಂಡದ ಪ್ರಮುಖ ರೇಸರ್ಗಳಾದ ಟಾಮ್ ಕ್ಯಾನಿಂಗ್ ಅವರ ಯುರೋಪಿಯನ್ ಅನುಭವ ಮತ್ತು ಸೋಹಿಲ್ ಶಾ ಅವರ ಸ್ಥಳೀಯ ವೇಗದ ಮೇಲೆ ಗಂಗೂಲಿ ಅಪಾರ ನಂಬಿಕೆ ಇಟ್ಟಿದ್ದಾರೆ.
