ಚನ್ನರಾಯಪಟ್ಟಣದಲ್ಲಿ ಜು.10ರಂದು ಶ್ರೀ ಸಾಯಿ ಬಾಬಾ ಗುರುಪೂರ್ಣಿಮಾ ಮಹೋತ್ಸವ

ಚನ್ನರಾಯಪಟ್ಟಣ ತಾಲ್ಲೂಕಿನ ರಾಜಾಪುರ ಗೇಟ್ ಬಳಿಯ ಶ್ರೀ ಸದ್ಗುರು ಸಾಯಿ ಮಂದಿರದಲ್ಲಿ ಜುಲೈ 10ರಂದು ಶ್ರೀ ಸಾಯಿ ಬಾಬಾ ಗುರುಪೂರ್ಣಿಮಾ ಮಹೋತ್ಸವ ನಡೆಯಲಿದೆ. ಬೆಳಿಗ್ಗೆ ಗಂಗಾ ಪೂಜೆ, ವ್ಯಾಸಪೂಜೆ, ಭಿಕ್ಷಾವಂದನೆ, ಕುಂಭಾಭಿಷೇಕ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ರಾತ್ರಿ ಶೇಜಾ ಆರತಿಯ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. 5 ಸಾವಿರ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.