ಬೆಂಗಳೂರು: ಇಂದು ಕರ್ನಾಟಕ ಪರೀಕ್ಷಾ ಮಂಡಳಿ SSLC ಫಲಿತಾಂಶ ಪ್ರಕಟ ಮಾಡಲಾಗಿದೆ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ SSLC ಪರೀಕ್ಷೆ ನಡೆದಿತ್ತು. ಇದೀಗ ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕದಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಸುಮಾರು 8.96 ಲಕ್ಷ ವಿದ್ಯಾರ್ಥಿಗಳು, 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದರು.
ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯ ಮಾಪಕರು 6 ವಿಷಯಗಳಿಗೆ ಸೇರಿದ 60 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿಸಿರುವ ಕರ್ನಾಟಕ ಪರೀಕ್ಷಾ ಮಂಡಳಿ ಇಂದು ಫಲಿತಾಂಶ ಪ್ರಕಟ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 66.14ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ!
ಗಂಡು ಮಕ್ಕಳು – 58.07%
ಹೆಣ್ಣು ಮಕ್ಕಳು – 74.00%
ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು 7 ಲಕ್ಷ 90 ಸಾವಿರದ 890. ಅದರಲ್ಲಿ 5 ಲಕ್ಷ 23 ಸಾವಿರದ 075 ಮಕ್ಕಳು ಈ ಬಾರಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.

ಯಾವ ಜಿಲ್ಲೆಗೆ ಎಷ್ಟು ಫಲಿತಾಂಶ?
- ದಕ್ಷಿಣ ಕನ್ನಡ- 91.12
- ಉಡುಪಿ-89.96
- ಉತ್ತರ ಕನ್ನಡ- 83.19
- ಶಿವಮೊಗ್ಗ- 82.29
- ಕೊಡಗು – 82.21
- ಹಾಸನ- 82.12
- ಶಿರಸಿ- 80.47
- ಚಿಕ್ಕಮಗಳೂರು- 77.9
- ಬೆಂಗಳೂರು ಗ್ರಾಮಾಂತರ- 74.02
- ಬೆಂಗಳೂರು ದಕ್ಷಿಣ- 72.3
- ಬೆಂಗಳೂರು ಉತ್ತರ – 72.27
- ಮಂಡ್ಯ- 13476
- ಹಾವೇರಿ- 69.03
- ಕೋಲಾರ- 68.47
- ಮೈಸೂರು- 68.39
- ಬಾಗಲಕೋಟೆ- 68.29
- ಗದಗ- 67.72
- ಧಾರವಾಡ- 67.62
- ವಿಜಯನಗರ- 67.62
- ತುಮಕೂರು- 67.03
- ದಾವಣಗೆರೆ- 66.09
- ಚಿಕ್ಕಬಳ್ಳಾಪುರ- 63.64
- ಚಿತ್ರದುರ್ಗ- 63.21
- ರಾಮನಗರ- 63.12
- ಬೆಳಗಾವಿ- 62.16
- ಚಿಕ್ಕೋಡಿ- 62.12
- ಚಾಮರಾಜನಗರ- 61.45
- ಮಧುಗಿರಿ- 60.65
- ಬಳ್ಳಾರಿ- 60.26
- ಕೊಪ್ಪಳ – 57.32
- ಬೀದರ್ – 53.25
- ರಾಯಚೂರು – 52.05
- ಯಾದಗಿರಿ – 51.6
- ವಿಜಯಪುರ – 49.58
- ಕಲಬುರಗಿ – 42.43
