
ಮಣಿಪಾಲ್ – ಮಾನ್ಯ ಮುಖ್ಯಮಂತ್ರಿಗಳು ಇಂದು ಮಂಡಿಸಿದ ರಾಜ್ಯ ಬಜೆಟ್ ಆರೋಗ್ಯ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದು ಸಂತೋಷ ತಂದಿದೆ. ತಾಯಂದಿರ ಮರಣ ಪ್ರಮಾಣ(ಎಂಎಂಆರ್) ತಗ್ಗಿಸಲು ರೂಪಿಸಲಾದ ಕಾರ್ಯಕ್ರಮಗಳು ಹಾಗೂ ಎಂಎಂಆರ್ ಬಗ್ಗೆ ಆಡಿಟ್ಗೆ ಸೂಚಿಸಿದ್ದು ಉತ್ತಮ ನಿರ್ಧಾರ. ಆರೋಗ್ಯ ಕ್ಷೇತ್ರದಲ್ಲಿ ತಾಯಂದಿರ ಮರಣ ಪ್ರಮಾಣ ಒಂದು ಮಹತ್ವದ ಸೂಚ್ಯಕವಾಗಿದೆ. ಇದರ ಜತೆಗೆ ಗರ್ಭಿಣಿಯರಲ್ಲಿ ಅನೆಮಿಯಾ ತಡೆಗಟ್ಟುವ ಹಾಗೂ ಸೂಕ್ತ ಪೌಷ್ಟಿಕಾಂಶಗಳನ್ನು ನೀಡುವ ಸಲುವಾಗಿ ಪೌಷ್ಟಿಕಾಂಶ ಕಿಟ್ ವಿತರಣೆಗೆ ನಿರ್ಧರಿಸಿರುವುದು ಸ್ವಾಗತಾರ್ಹ ನಡೆ. ಇದು ತಾಯಂದಿರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ನಿರ್ಧಾರ .
ತಾಲೂಕಾ ಮಟ್ಟದಲ್ಲಿ ಸೂಪರ್ಸ್ಪೆಷಾಲಿಟಿ ಆರೈಕೆ ನೀಡಲು ಎಮ್ಸಿಹೆಚ್ ತಜ್ಞರ ನಿಯೋಜನೆ ಹಾಗೂ ಬೆಂಗಳೂರು ಸೇರಿ ರಾಜ್ಯದಾದ್ಯಂತ ಕ್ರಿಟಿಕಲ್ ಕೇರ್ ಕೇಂದ್ರಗಳನ್ನು ಆರಂಭಿಸುವ ಘೋಷಣೆ ಮಹತ್ವದ ನಿರ್ಧಾರವಾಗಿದೆ. ಕಲಬುಗರ್ಗಿ, ಬೆಂಗಳೂರು ಮತ್ತು ಗದಗ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಘೋಷಣೆ, ಮಾನಸಿಕ ಆರೋಗ್ಯ ರಕ್ಷಣೆಗೆ ರಾಜ್ಯದ ಜಿಲ್ಲೆಗಳಲ್ಲಿ ನಿಮ್ಹಾನ್ಸ್ ಮಾದರಿಯ ಕೇಂದ್ರ ಸ್ಥಾಪನೆ, ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳ ಹೆಚ್ಚಳ, ಹೊಸ ವೈದ್ಯಕೀಯ ಕಾಲೇಜುಗಳ ಸ್ತಾಪನೆ ಘೋಷಣೆ ಆರೋಗ್ಯ ಕ್ಷೇತ್ರಕ್ಕೆ ಬಲಹೆಚ್ಚಿಸಿದೆ. ಇದರ ಜತೆಗೆ ಸವಲತ್ತುಗಳಿಂದ ದೂರವಿರುವ ಜನರಿಗಾಗಿ ಘೋಷಿಸಲಾದ ಆರೋಗ್ಯ ಯೋಜನೆಗಳು ಆರೋಗ್ಯ ಸವಲತ್ತುಗಳು ಪ್ರತಿಯೊಬ್ಬರನ್ನೂ ತಲುಪಲು ನೆರವಾಗಿದೆ.
ಶ್ರವಣ ಸಂಜೀವಿನಿ ಯೋಜನೆ ಮೂಲಕ ಮಕ್ಕಳಲ್ಲಿ ಕಾಡುವ ಶ್ರವಣ ಸಮಸ್ಯೆಯನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡುವ ಹಾಗೂ ಕೋಕ್ಲೆಯರ್ ಇಂಪ್ಲ್ಯಾಂಟ್ ಶಸ್ತ್ರಚಿಕಿತ್ಸೆ, ಕೋಕ್ಲೆಯರ್ ರಿಪೇರಿ ಗೆ 12 ಕೋಟಿ ರೂ. ನೀಡಿರುವುದು ಉತ್ತಮ ನಿರ್ಧಾರ.
ಪ್ರಾಥಮಿಕ ಆರೈಕೆ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಗೌರವ ಧನ ಏರಿಕೆ ಮಾಡಿರುವುದು ಸ್ವಾಗತಾರ್ಹ. ಬಜೆಟ್ನಲ್ಲಿ ಘೋಷಣೆಯಾದ ಎಲ್ಲಾ ಯೋಜನೆಗಳು ರಾಜ್ಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಒಟ್ಟಾರೆ ಇದೊಂದು ಉತ್ತಮ ಬಜೆಟ್”
– ಡಾ. ಹೆಚ್ ಸುದರ್ಶನ್ ಬಲ್ಲಾಳ
ಚೇರ್ ಮನ್,
ಮಣಿಪಾಲ್ ಆಸ್ಪತ್ರೆ