‘ಕರ್ನಾಟಕ ಗೃಹ ಮಂಡಳಿ’ಗೆ 2760 ಎಕರೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ — ರೈತರಿಂದ ಭಾರಿ ವಿರೋಧ

ಕರ್ನಾಟಕ ಸರ್ಕಾರ ‘ಕರ್ನಾಟಕ ಗೃಹ ಮಂಡಳಿ’ ಯೋಜನೆಗಾಗಿ 2,760 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಭೂಸ್ವಾಧೀನ ನೋಟಿಸ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ರೈತರು “ಭೂಮಿ ಬಿಡಲ್ಲ, ಪ್ರಾಣ ಬಿಡುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.