ಕೆ ಆರ್ ಪೇಟೆ: ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿಹೋಗುತ್ತಿರುವ ಈ ದಿನಗಳಲ್ಲಿ ಅಘಲಯ ಗ್ರಾಮದ ಯುವ ಮುಖಂಡ ಅಜಯ್ ರಾಮೇಗೌಡ ಬಳಗದ ವತಿಯಿಂದ ಗ್ರಾಮದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿರುವುದು ಸಂತೋಷದ ವಿಚಾರ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಶ್ರೀ ಹೊನ್ನಮ್ಮದೇವಿ ಹಾಗೂ ಶ್ರೀ ಕಾಲಭೈರವೇಶ್ವರ ಮೊದಲ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಅಘಲಯ ಗ್ರಾಮಸ್ಥರು,ಜೆಡಿಎಸ್ ಮುಖಂಡ ಅಘಲಯ ಅಜಯ್ ರಾಮೇಗೌಡ ಹಾಗೂ ಹಳ್ಳಿಕಾರ್ ಸಂರಕ್ಷಕ ಸಂದೀಪ್ ಆಯೋಜಿಸಿದ ಎರಡು ದಿನದ ನಡೆಯುವ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಚಾಲನೆ ಮಾತನಾಡಿದರು.ನಮ್ಮ ತಾಲ್ಲೂಕಿನ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಅಘಲಯ ಗ್ರಾಮದ ಹಿರಿಯರ ಸಹಕಾರ ನಮ್ಮ ಪಕ್ಷದ ಕ್ರಿಯಾಶೀಲ ಯುವ ಮುಖಂಡ ಅಜಯ್ ರಾಮೇಗೌಡರ ಯುವ ಬಳಗದ ನೇತೃತ್ವದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ .ಎತ್ತಿನ ಗಾಡಿ ಓಟ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ತಾತ, ಮುತ್ತಾತರ ಕಾಲದಿಂದ ಸಾಕುತ್ತಿರುವ ಉತ್ತಮ ರಾಸುಗಳನ್ನು ರೈತರು ಪ್ರೀತಿಯಿಂದ ಸಾಕುತ್ತಿದ್ದಾರೆ. ಅವರಿಗೆ ಈ ಸ್ಪರ್ಧೆಗಳು ಪ್ರೇರಣೆ ನೀಡುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸೋಲು, ಗೆಲವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಅವರು.ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇಂದಿನ ಯುವಕರು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಕುರಿತು ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ ಮಾತನಾಡಿದರು.
ಹೋಯ್, ಹೋಯ್ ಎಂದು ಕಿರುಚುತ್ತ, ಎತ್ತುಗಳ ಮೈ ತಟ್ಟುತ್ತ ಚುರುಕು ಮುಟ್ಟಿಸುತ್ತಿದ್ದರು. ನಾಗಾಲೋಟದಲ್ಲಿ ಓಡುತ್ತಿದ್ದ ಎತ್ತುಗಳು.ಇನ್ನು ಕೆಲವು ಸ್ಪರ್ಧಿಗಳು ಎತ್ತುಗಳಿಗೆ ಕಟ್ಟಿರುವ ಹಗ್ಗದ ಸನ್ನೆಯ ಮೂಲಕವೇ ಗೆಲುವಿನ ದಡ ಸೇರುತ್ತಿದ್ದರು. ನೆರೆದ ಪ್ರೇಕ್ಷ ಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸಿದರು.ಸ್ಪರ್ದಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಹಳ್ಳಿಕಾರ್, ಗಿಡ್ಡಗಾಡು ಸೇರಿದಂತೆ ಇನ್ನಿತರ ಜಾತಿಯ 50ಕ್ಕೂ ಹೆಚ್ಚು ಎತ್ತುಗಳು ಭಾಗವಹಿಸಿ ಗೆಲುವಿಗಾಗಿ ಸೆಣೆಸಾಡಿದರು. ಜೋಡಿ ಎತ್ತುಗಳ ಬಂಡಿ ಓಡಿಸುವ ಸವಾರರು ಗೆಲುವಿಗಾಗಿ ಹರಸಾಹಸ ಪಟ್ಟರು.

ಸ್ಪರ್ಧೆಯಲ್ಲಿ ವಿಜೇತ ಜೋಡಿ ಎತ್ತುಗಳ ಮಾಲೀಕರಿಗೆ ಪ್ರಥಮ ಬಹುಮಾನ ಒಂದು ದ್ವಿಚಕ್ರ ವಾಹನ ಜೊತೆ ರೂ.30.000, ದ್ವಿತೀಯ ಬಹುಮಾನ ಒಂದು ದ್ವಿಚಕ್ರ ವಾಹನ ಜೊತೆ ರೂ 20.000, ತೃತೀಯ ಬಹುಮಾನ ರೂ.10.000, ದ್ವಿಚಕ್ರ ವಾಹನ, ಚತುರ್ಥ ಬಹುಮಾನ ರೂ.30.000 ನಗದು ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ದಾತಿಗಳಿಗೆ ಸಮಾಧಾನಕರ ಸುಂದರ ಟ್ರೋಪಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಜಾನಕಿರಾಮ್,ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್, ಮುಖಂಡರಾದ ಶ್ರೀಧರ್,ನಾಗೇಂದ್ರ,ರಾಜೇಗೌಡ, ರಾಜೇಶ್, ವೆಂಕಟೇಶ್, ಮುನಿರಾಜು, ನವೀನ್, ನುಂಗರಾಜು, ನಿಶ್ಚಿತ, ವೆಂಕಟೇಶ್,ಯೋಗಣ್ಣ, ರಾಮಣ್ಣ ಗಣೇಶ ಬಲರಾಮ್, ಸತೀಶ್, ಸ್ಪರ್ಧೆಯ ಆಯೋಜಕರಾದ ಅಜಯ್ ರಾಮೇಗೌಡ, ನಂದೀಶ್, ಸಂದೀಪ್, ವಿಷ್ಣುಗೌಡ,ಹರ್ಷ ಸಚಿನ್,ಸೇರಿದಂತೆ ಗ್ರಾಮಸ್ಥರಿದರು.
-ಮನು ಮಾಕವಳ್ಳಿ ಕೆ ಆರ್ ಪೇಟೆ
