ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಾಹಿತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಸಾಂಸ್ಕೃತಿಕ ಪರಿಚಾರಕ , ಉಪನ್ಯಾಸಕರಾದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರ 28 ವರ್ಷಗಳ ಸಾಂಸ್ಕೃತಿಕ ಸೇವೆಯನ್ನು ಪರಿಚಯಿಸುವ ಕೆಲಸವನ್ನು ಏಪ್ರಿಲ್ 10,2025 ರ ಗುರುವಾರ ವಿಚಾರ ಸಂಕಿರಣದ ಮೂಲಕ ಏರ್ಪಡಿಸಿದೆ.
ಡಾ.ಸಿಸಿರಾ ಸ್ನೇಹ ಬಳಗ ಹಾಗೂ ಸಾಹಿತ್ಯ ಸರಸ್ವತಿ ಕಲಾ ವೇದಿಕೆ, ಸ್ನೇಹ ಕೂಟ ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಮಾರಂಭವನ್ನು ಅಂತರ್ ರಾಷ್ಟ್ರೀಯ ಖ್ಯಾತಿಯ ಸಾಹಿತಿ ನಾಡೋಜ ಹಂಪನಾ ಉದ್ಘಾಟಿಸಲಿದ್ದು, ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಲೇಖಕಿ, ಕುಂಚ ಕಲಾವಿದೆ ಶಾಂತಿ ವಾಸು ಅವರ ‘ ಅಂತಃಪುರ ದರ್ಪಣ ‘ ಕಥಾ ಸಂಕಲನವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಲೋಕಾರ್ಪಣೆ ಮಾಡಿ ಡಾ.ಸಿಸಿರಾ, ಶಾಂತಿ ವಾಸು, ಮತ್ತು ಸಿಸಿರಾ ಸ್ನೇಹ ಬಳಗ ಸ್ಥಾಪಿಸಿರುವ ಸಾಹಿತ್ಯ, ಸಂಸ್ಕೃತಿ ಪ್ರಶಸ್ತಿಯನ್ನು ಯುವ ಬರಹಗಾರರಾದ ರಮೇಶ್ ಎಂ ಕಮತಗಿ ಹಾಗೂ ಪ್ರೊ.ಸಿದ್ದೇಶ್ ದುಗ್ಗೇನಹಳ್ಳಿ ಅವರಿಗೆ ಪ್ರದಾನ ಮಾಡುವರು. ನಂತರ ನಡೆಯುವ ಡಾ.ಸಿಸಿರಾ ಬದುಕು ಬರಹ ವಿಚಾರ ಸಂಕಿರಣದಲ್ಲಿ ಪ್ರೊ.ಎಂ.ವಿ.ನೆಗಳೂರು, ನೀಲಾವರ ಸುರೇಂದ್ರ ಅಡಿಗ, ಸಾ.ಮ.ಶಿವಮಲ್ಲಯ್ಯ ಅವರುಗಳು ಸಿಸಿರಾ ಅವರ ವಿವಿಧ ಕ್ಷೇತ್ರಗಳಸೇವೆಯನ್ನು ಕುರಿತು ಮಾತನಾಡಲಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡರು, ಸಾಹಿತಿ ಕೆ.ಎಂ.ರೇವಣ್ಣ, ಉದ್ಯಮಿ ಎ.ವಿ.ಗುರುತೇಜಸ್, ಲಯನ್ ಮಂಗಳಗೌರಿ ಅರಸು, ಲೇಖಕಿ ಅಂಬುಜಾ ಪ್ರಕಾಶ್ ಸೇರಿದಂತೆ ಅನೇಕ ಸಾಹಿತ್ಯ, ಸಂಸ್ಕೃತಿ, ಸಮಾಜಮುಖಿ ಚಿಂತಕರು ಭಾಗವಹಿಸಿ ಸಿಸಿರಾ ಅವರೊಂದಿಗೆ ಸಂವಾದಿಸುವರು, ಸಿಸಿರಾ ಕುರಿತು ಕವಿತೆ ವಾಚಿಸುವರು.
ಇದೇ ಸಂದರ್ಭದಲ್ಲಿ ಪಿಹೆಚ್.ಡಿ ಪಡೆದವರು, ಕನ್ನಡ ನುಡಿ ಸೇವಕರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹ ಬಳಗದ ಪರವಾಗಿ ಪ್ರಾಧ್ಯಾಪಕ ಡಾ.ಆರ್.ವಾದಿರಾಜ್, ಕವಿ ಡಾ.ಕೃಷ್ಣ ಹಾನ್ ಬಾಳ್, ನಿರೂಪಕ ಎಲ್.ರವಿಬಸವಲಿಂಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
