ಕೂಡ್ಲಗಿ: ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರದ ಬಳಿ ಸ್ಥಾಪನೆಗೊಂಡಿರುವ ರಾಜ್ಯದ ಮೊದಲ ಹುಣಸೆಹಣ್ಣು ಮತ್ತು ಶೇಂಗಾ ಸಂಸ್ಕರಣ ಘಟಕವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 17 ರಂದು ಭವ್ಯವಾಗಿ ಉದ್ಘಾಟಿಸಲಿದ್ದಾರೆ.
ಈ ಘಟಕವನ್ನು ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣೆ ಕುರಿತು ತರಬೇತಿ ನೀಡಲು ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಮೌಲ್ಯವರ್ಧನೆ ಮಾಡಲು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಘಟಕದ ಮೂಲಕ ರೈತರಿಗೆ ಹುಣಸೆ ಮತ್ತು ಶೇಂಗಾ ಸಂಸ್ಕರಣೆಯ ಪ್ರಾಥಮಿಕ ಹಂತದಿಂದ ಮಾರುಕಟ್ಟೆ ವಿಸ್ತರಣೆವರೆಗಿನ ಮಾರ್ಗದರ್ಶನ ಲಭ್ಯವಾಗಲಿದೆ.
ಈ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಪ್ರತಿನಿಧಿಗಳು ಹಾಜರಾಗಲಿದ್ದಾರೆ.
ಸ್ಥಳೀಯ ರೈತರು ಈ ಘಟಕದ ಉದ್ಘಾಟನೆಯಿಂದ ತಮ್ಮ ಉತ್ಪನ್ನಗಳಿಗೆ ಹೊಸ ಮೌಲ್ಯ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಕರ್ನಾಟಕದ ರಾಜ್ಯಪಕ್ಷಿ ನೀಲಕಂಠ
