ಕೂಡ್ಲಿಗಿಯಲ್ಲಿ ರಾಜ್ಯದ ಮೊದಲ ಹುಣಸೆ ಹಾಗೂ ಶೇಂಗಾ ಸಂಸ್ಕರಣ ಘಟಕ ಉದ್ಘಾಟನೆ

ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರದಲ್ಲಿ ರಾಜ್ಯದ ಮೊದಲ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣ ಘಟಕವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಕ್ಟೋಬರ್ 17ರಂದು ಉದ್ಘಾಟಿಸಿದರು. ಘಟಕವು ರೈತರಿಗೆ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿ ನೀಡಲಿದೆ.